ಬಂಧುಮಿತ್ರರ ಸಮ್ಮಿಲನ ಕಾರ್ಯಕ್ರಮ
ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕ ರತ್ನಾಕರ ಗೌಡರವರ 75 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಸನ್ಮಾನ, ಬಂಧುಮಿತ್ರರ ಸಮ್ಮಿಲನ ಕಾರ್ಯಕ್ರಮವು ಅ.27 ರಂದು ಕಕ್ಕೆಬೆಟ್ಟು ಮನೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಳಡ್ಕ ಕುಟುಂಬದ ಹಿರಿಯರಾದ ಚಿನ್ನಪ್ಪ ಗೌಡ ರವರು ವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು. ಅಭಿನಂದನಾ ಭಾಷಣವನ್ನು ಸುಳ್ಯದ ನ್ಯಾಯವಾದಿ ದಿನೇಶ್ ಮಡಪ್ಪಾಡಿ ಮಾಡಿದರು.
ಮುಖ್ಯ ಅತಿಥಿಗಳಾಗಿ ನರಸಿಂಹ ಶಾಸ್ತಾವು ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಅಮೈ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ, ಗ್ರಾ.ಪಂ ಸದಸ್ಯ ಹರೀಶ್ ರೈ ಉಬರಡ್ಕ, ವೆಂಕಟ್ರಮಣ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯ ನಿರ್ದೇಶಕ ಕೆ.ಸಿ.ನಾರಾಯಣ ಗೌಡ ಕುಯಿಂತೋಡು, ಉಪಸ್ಥಿತರಿದ್ದು ಶುಭ ಹಾರೈಸಿದರು.
ನಂತರ ರತ್ನಾಕರ ಗೌಡ ಮತ್ತು ಶ್ರೀಮತಿ ಭಾಗೀರಥಿ ಇವರನ್ನು ಕುಟುಂಬದ ಸದಸ್ಯರು, ಊರವರು, ಬಂಧುಗಳು ಸೇರಿ ಸನ್ಮಾನಿಸಿ, ಶುಭಹಾರೈಸಿದರು.
ಪುತ್ರ ಶಿವಪ್ರಸಾದ್, ಪುತ್ರಿಯರಾದ ಶ್ರೀಮತಿ ಲತಾ, ಶ್ರೀಮತಿ ವಿದ್ಯಾಶಾಲಿನಿ, ಶ್ರೀಮತಿ ಚೈತ್ರ, ಅಳಿಯಂದಿರಾದ ಧನೇಶ್ ಕುಮಾರ್, ಭಾನುಪ್ರಕಾಶ್ ಹಾಗೂ ಬಳ್ಳಡ್ಕ ಕುಟುಂಬಸ್ಥರು ಹಾಜರಿದ್ದರು.
ಕು.ವೈಷ್ಣವಿ ಪ್ರಾರ್ಥಿಸಿದರು. ಧನೇಶ್ ಕುಮಾರ್ ಸ್ವಾಗತಿಸಿ, ಶ್ರೀಮತಿ ವಿದ್ಯಾ ಶಾಲಿನಿ ವಂದಿಸಿದರು. ಧನೇಶ್ ಕುಮಾರ್ ಸ್ವಾಗತಿಸಿದರು. ಕೆ.ಟಿ.ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.