ಅ. 15ರಂದು ನಿಧನರಾದ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಒಳಮೊಗ್ರು ಗ್ರಾಮದ ಮುಂಡೋವುಮೂಲೆಯವರಾಗಿದ್ದು, ಮಂಡೆಕೋಲು ಗ್ರಾಮದ ಮುರೂರು ಎಂಬಲ್ಲಿ ವಾಸವಾಗಿದ್ದ ಬಾಬು ನಾಯ್ಕರಿಗೆ ಶ್ರದ್ಧಾಂಜಲಿ ಸಭೆ ಅ. 27ರಂದು ನಡೆಯಿತು. ಕರುಣಾಕರ ಮುಂಡೋವುಮೂಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ನಿವೃತ್ತ ಶಿಕ್ಷಕ ಮಹಾಬಲ ರೈ ಕರ್ಣೂರು, ಮುಂಡೋವುಮೂಲೆ ತರವಾಡು ಮನೆಯ ಅಧ್ಯಕ್ಷ ಮೋಹನ್ ನಾಯ್ಕ್ ಮುಂಡೋವುಮೂಲೆ, ನಿವೃತ್ತ ಅಂಚೆ ಪಾಲಕ ಚಿತ್ತರಂಜನ್ ದೊಡ್ಡಪಾರು ಮತ್ತು ದ.ಕ. ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಮುಖ್ಯಸ್ಥರಾದ ಶ್ರೀಧರ ನಾಯ್ಕ್ ಮುಂಡೋವುಮೂಲೆ ಮೃತರಿಗೆ ನುಡಿನಮನ ಸಲ್ಲಿಸಿದರು.
ಮೃತರ ಪತ್ನಿ ನಿವೃತ್ತ ಶಿಕ್ಷಕಿ ಶ್ರೀಮತಿ ಚಂದ್ರಿಕಾ, ಪುತ್ರ ಕಿರಣ ಬಿ.ಸಿ, ಪುತ್ರಿ ಶ್ರೀಮತಿ ಕೀರ್ತಿ ವಿನೋದ್ ಬಿ.ಸಿ, ಸಹೋದರರಾದ ಶೀನ ನಾಯ್ಕ ಮುಂಡೋವುಮೂಲೆ, ಜನಾರ್ಧನ ನಾಯ್ಕ ಮುಂಡೋವುಮೂಲೆ ಸೇರಿದಂತೆ ಸಹೋದರಿಯರು, ಮೊಮ್ಮಗಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಸಭೆಯಲ್ಲಿ ಉಪಸ್ಥಿತರಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.