ಪಾರ್ಕಿಂಗ್ ವ್ಯವಸ್ಥೆ ಸಮರ್ಪಕಗೊಳಿಸಲು ಮನವಿ
ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಬೆಳಗ್ಗಿನ ಉಪಹಾರದಲ್ಲಿ ಬ್ರೆಡ್ ಬದಲಾಗಿ ಇಡ್ಲಿ ಸಾಂಬಾರು ನೀಡುವಂತೆ ಆರೋಗ್ಯ ಸಚಿವರಿಗೆ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಹೀದ್ ಪಾರೆ ಮನವಿ ಮಾಡಿದ್ದಾರೆ.
ಸುಳ್ಯ ತಾಲೂಕು ಆರೋಗ್ಯ ಕೇಂದ್ರಕ್ಕೆ 2024-25ನೇ ಸಾಲಿನ ಪಥ್ಯಾಹಾರ ಸರಬರಾಜಿಗೆ ದಿನೇಶ್, ಎಸ್ ಆರ್.ಕೆ ಮ್ಯಾನ್ ಪವರ್ ಏಜೆನ್ಸಿಸ್ ಸಾಗರ ಇವರಿಗೆ ಕಾಯಾದೇಶ ನೀಡಿದ್ದು ಈ ಟೆಂಡರ್ನಂತೆ ಬೆಳಗ್ಗಿನ ಉಪಹಾರವಾಗಿ ಬ್ರೆಡ್, ಕಾಫಿ/ಹಾಲು ನೀಡುತ್ತಿದ್ದು, ಬ್ರೆಡ್ನ ಬದಲಾಗಿ ಇಡ್ಲಿ, ತೋವೆಯನ್ನು ಆಸ್ಪತ್ರೆಯ ಬಡ ರೋಗಿಗಳಿಗೆ ಬೆಳಗ್ಗಿನ ಪಥ್ಯಾಹಾರವಾಗಿ ನೀಡಬೇಕೆಂದು ಬಡರೋಗಿಗಳ ಪರವಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹಾಗೂ ತಾಲೂಕು ಆಸ್ಪತ್ರೆಯಲ್ಲಿ ನ ಪಾರ್ಕಿಂಗ್ ವ್ಯವಸ್ಥೆಯನ್ನು ಸಮರ್ಪಕಗೊಳಿಸಲು ಸೂಕ್ತ ಕ್ರಮಕೈಗೊಳ್ಳುವಂತೆಯೂ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಿಗೆ ನೀಡಿದ ಮನವಿಯಲ್ಲಿ ವಿನಂತಿಸಿದ್ದಾರೆ.