ಇದು ಅವರ ಸಾಧನೆಗೆ ಸಂದ ಗೌರವ : ಅಭಿಮಾನಿ ಬಳಗದಿಂದ ಶ್ಲಾಘನೆ
ಮಂಗಳೂರಿನಲ್ಲಿ ನಡೆದ ಜಿಲ್ಲಾ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸುಳ್ಯದಲ್ಲಿ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕ್ರೀಡಾ, ಕಲಾ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಸುಳ್ಯ ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಗೋಕುಲ್ ದಾಸ್ ಸುಳ್ಯ ಇವರು 2024-25ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿ ಸುಳ್ಯಕ್ಕೆ ಆಗಮಿಸಿದಾಗ ಸುಳ್ಯ ರಥ ಬೀದಿ ಬಳಿ ಅವರ ಅಭಿಮಾನಿಗಳು ಮತ್ತು ಕುಟುಂಬದ ಸದಸ್ಯರುಗಳು ಗೋಕುಲ್ ದಾಸ್ ಅವರಿಗೆ ಭವ್ಯ ಸ್ವಾಗತವನ್ನು ಕೋರಿದರು.
ಗೋಕುಲ್ ದಾಸ್ ರವರು ಸುಳ್ಯಕ್ಕೆ ಬರುತ್ತಿದ್ದಂತೆ ಅವರ ಕುಟುಂಬದ ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹೂ ಗುಚ್ಛ ನೀಡಿ ಶಾಲು ಹೊದಿಸಿ ಬರಮಾಡಿಕೊಂಡರು.
ಈ ಸಂಧರ್ಭ ಕಾರ್ಯಕ್ರಮ ಆಯೋಜನೆ ಮಾಡಿದ್ದ ಸುಳ್ಯ S6 ತಂಡದ ಪದಾಧಿಕಾರಿಗಳು, ಸದಸ್ಯರುಗಳು, ಇತರ ಸಂಘ ಸಂಸ್ಥೆಗಳ ಮುಖಂಡರುಗಳು ಅವರಿಗೆ ಹೂ ಗುಚ್ಛ ನೀಡಿ ಹಾರ ಹಾಕಿ ಸ್ವಾಗತಿಸಿ ಇವರ ಸೇವಾ ಮನೋಭಾವ ಮತ್ತು ಇವರು ಸಂಘ ಸಂಸ್ಥೆಗಳಲ್ಲಿ ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡಿ ಶುಭಹಾರೈಸಿದರು.
ಸುಳ್ಯ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಪದಾಧಿಕಾರಿಗಳಾದ ತೀರ್ಥರಾಮ ಜಾಲ್ಸೂರು, ಸುನಿಲ್ ಕೇರ್ಪಳ,ಅನಿಲ್ ಪರಿವಾರಕಾನ,ಬೂಡು ರಾಧಾ ಕೃಷ್ಣ ರೈ, ಮುಖಂಡರುಗಳಾದ ನಂದ ರಾಜ್ ಸಂಕೇಶ್,ಶಶಿಧರ ಎಂ ಜೆ, ಭವಾನಿ ಶಂಕರ್ ಕಲ್ಮಡ್ಕ,ಮಧು ಬೂಡು,ವಕೀಲ ಮೂಸಾ ಪೈಂಬಚ್ಚಾಲ್, ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್, ರಾಜು ಪಂಡಿತ್,ಮೊದಲಾದವರು ಉಪಸ್ಥಿತರಿದ್ದು ಮಾತನಾಡಿ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಪ್ರಶಸ್ತಿ ವಿಜೇತ ಗೋಕುಲ್ ದಾಸ್ ಇದು ನನಗೆ ಸಿಕ್ಕಿದ ಭಾಗ್ಯ ವಾಗಿದೆ. ಇದಕ್ಕೆ ಮೂಲ ಕಾರಣ ಸುಳ್ಯದ ಎಸ್ ಸಿಕ್ಸ್ ತಂಡ, ಅವರು ನನಗೆ ನೀಡಿದ ಗೌರವ ಮತ್ತು ಈ ಭಾರಿ ನನ್ನನ್ನು 50 ವರ್ಷದ ಸಾಧನೆಗೆ ಗುರುತಿಸಿದ ಭಾಗ್ಯದಿಂದ ನನಗೆ ಪ್ರಶಸ್ತಿ ಬಂದಿದೆ. ಅಲ್ಲದೆ ನಮ್ಮ ಶಾಸಕರು ಪಕ್ಷ ಭೇದ ಮರೆತು ನನ್ನ ಹೆಸರನ್ನು ಸೂಚಿಸಿದ್ದಾರೆ.
ಅಲ್ಲದೆ ನನ್ನ ಆತ್ಮೀಯ ಮಿತ್ರ ಭವಾನಿ ಶಂಕರ್ ಕಲ್ಮಡ್ಕ ಮತ್ತು ಮುಖಂಡರಾದ ಎಸ್ ಸಂಶುದ್ದೀನ್ ರವರ ಅವಿರತ ಶ್ರಮದಿಂದ ಸಿಕ್ಕಿದೆ ಎಂದರು.
ಬೂಡು ರಾಧಾ ಕೃಷ್ಣ ರೈ ಹಾಗೂ ನಾರಾಯಣ ಕೇಕಡ್ಕ ಕಾರ್ಯಕ್ರಮ ನಿರೂಪಿಸಿದರು.
ಮನೆಯವರು ಈ ಸಂಧರ್ಭದಲ್ಲಿ ಸಿಹಿ ತಿಂಡಿ ಮತ್ತು ತಂಪು ಪಾನಿಯ ವಿತರಿಸಿದರು.