ಬಂದಿತು ಬಂದಿತು ದೀಪಾವಳಿ ಹಬ್ಬ
ಸಂಭ್ರಮ ಸಡಗರವ ಹೊರಹೊಮ್ಮಿಸುವ ಹಬ್ಬ
ಮನೆಮನಗಳೆಲ್ಲವು ನಳನಳಿಸುವುದು
ದೀಪಾಲಂಕಾರದಿ ಶೋಭಿಸುವುದು ||
ಮನೆ ಮನಗಳ ಶುದ್ಧೀ ಕಾರ್ಯವು ಇಂದು
ಅಂಧಕಾರವನು ತೊಳೆಯುವರು ಅಂದು
ಅಜ್ಞಾನವನ್ನು ತೊರೆದು ಜ್ಞಾನ ದೀವಿಗೆ ಬೆಳಗುವರು
ಪರಸ್ಪರ ಪ್ರೀತಿ ಸ್ನೇಹವನು ಪಸರಿಸುವರು ||
ದೈವೀ ಬಲ , ನಂಬಿಕೆ ಇರುವುದು ಈ ಹಬ್ಬದಲಿ
ಸಾಕ್ಷಾತ್ ಲಕ್ಷ್ಮಿಯೇ ನೆಲೆಸುವಳು ಎಲ್ಲರ ಮನದಲಿ
ಕಳೆಯುವಳು ಕಷ್ಟಕೋಟಲೆಗಳನ್ನೆಲ್ಲಾ ಸರಿಸಿ
ಹರಸುವಳು ಸುಖ ನೆಮ್ಮದಿಯನ್ನು ಸುರಿಸಿ ||
ಜನರ ಮನಕೆ ಮುದವ ನೀಡುವ
ಬಲಿ ಚಕ್ರವರ್ತಿ ನಗುತ ಬರುವ
ಸಂತಸ ಸಡಗರ ಹೊತ್ತು ತರುವ
ದೀಪದ ಹಬ್ಬದಿ ಸಂಭ್ರಮ ಪಡುವ||