ನಂದಗೋಕುಲ ಟ್ರಸ್ಟ್ ವತಿಯಿಂದ ಅನಾರೋಗ್ಯ ಪೀಡಿತ ದಂಪತಿಯ ಮನೆ ದುರಸ್ತಿಗೆ ಸಹಾಯ ಹಸ್ತ

0

ಅನಾರೋಗ್ಯ ಪೀಡಿತ ಬಡ ದಂಪತಿಗೆ ವಾಸಕ್ಕೆ ಯೋಗ್ಯವಾದ ರೀತಿಯಲ್ಲಿ ಮನೆಯನ್ನು ದುರಸ್ತಿ ಪಡಿಸುವ ಸಲುವಾಗಿ ನಂದಗೋಕುಲ ಟ್ರಸ್ಟ್ ಫಂಡ್ ನಿಂದ ಸಹಾಯ ಹಸ್ತ ನೀಡುವ ಮೂಲಕ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ.

ಕಡಬದ ಕುಂತೂರು ಗ್ರಾಮದಎರ್ಮಾಳದಲ್ಲಿರುವ ಕುಶಾಲಪ್ಪ ಮತ್ತು ಲೀಲಾವತಿ ದಂಪತಿಯು ಕಳೆದ ಕೆಲ ಸಮಯಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು ಅವರ ಮನೆಯ ಪರಿಸ್ಥಿತಿ ಶೋಚನೀಯ
ಸ್ಥಿತಿಯಲ್ಲಿತ್ತು.


ಇದನ್ನು ಮನಗಂಡ ನಂದಗೋಕುಲ ಟ್ರಸ್ಟ್ ಫಂಡ್ ನಿಂದ ರೂ. 61,155 ಮೌಲ್ಯದಲ್ಲಿ ಮನೆಯ ಚಾವಣಿ ದುರಸ್ತಿ ಪಡಿಸಿ ಸ್ನಾನದ ಮನೆ ಮತ್ತು ಶೌಚಾಲಯವನ್ನು ನಿರ್ಮಿಸಿಕೊಡಲಾಯಿತು. ಅಲ್ಲದೆ ಅಗತ್ಯ ದಿನಸಿ ಸಾಮಗ್ರಿಗಳನ್ನು ನೀಡಲಾಯಿತು.

ನಂದಗೋಕುಲ ಟ್ರಸ್ಟ್ ಫಂಡ್ ನ ಸದಸ್ಯರಾದ ಮೋಹನ್ ಕೆ ಪಿ, ನಾಗೇಶ್, ರವಿರಾಜ್, ನವೀನ್ ಕೆ ಪಿ, ಪ್ರಮೋದ್,ಪವನ್, ಮೋಹನ್, ಪ್ರಸಾದ್ ಅರುಣ್, ನಿತಿನ್, ಅಮೃತ್,ಕಾರ್ತಿಕ್ ಎಂ, ಹರಿಪ್ರಸಾದ್, ಸೃಜನ್ ,ಶೃತಿ, ಕಾವ್ಯ, ಲಿಖಿತಾ, ರಕ್ಷಾ, ರೂಪ, ಸೌಮ್ಯ, ಪ್ರಮೀಳಾ ರವರು ಸಹಕರಿಸಿದರು. ಈ ಸಂದರ್ಭದಲ್ಲಿ ವಾಗ್ಮಿ ಸುರೇಶ್ ಪಡಿಪಂಡ ರವರು ಉಪಸ್ಥಿತರಿದ್ದರು.