ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ಜಯಪ್ರಸಾದ ಆನೆಕಾರ ಆಯ್ಕೆ

0

ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ಜಯಪ್ರಸಾದ ಆನೆಕಾರ ಅವರು ಗರಿಷ್ಠ ಮತಗಳೊಂದಿಗೆ ಆಯ್ಕೆಯಾಗಿದ್ದಾರೆ. ಮಂಗಳೂರಿನ ಯೇನಪೋಯ ದಂತ ವೈದ್ಯಕೀಯ ಕಾಲೇಜಿನಲ್ಲಿ ನ.23 ರಂದು ನಡೆದ ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿಯ ರಾಷ್ಟ್ರೀಯ ಸಮ್ಮೇಳನದ ಸಂಘಟನಾ ಸಮಿತಿಯ ಭಾಗವಾಗಿದ್ದರು. ಡಾ.ಜಯಪ್ರಸಾದ ಆನೆಕಾರ ಅವರು ಸುಳ್ಯದ ಕೆವಿಜಿ ದಂತ ಮಹಾವಿದ್ಯಾಲಯದಲ್ಲಿ ಮುಖ-ದವಡೆಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಮತ್ತು ಸುಳ್ಯದ ಆನೆಕಾರ ಡೆಂಟಲ್ ಕ್ಲಿನಿಕ್ ನ ವೈದ್ಯರಾಗಿದ್ದಾರೆ.
ಇವರು ಅಮರಮುಡ್ನೂರು ಗ್ರಾಮದ ಅನೆಕಾರು ಗಣಪಯ್ಯ ಮತ್ತು ಶ್ರೀಮತಿ ಹೇಮಾ ದಂಪತಿಗಳ ಪುತ್ರ.