ಸುಮಾರು 700ಕ್ಕೂ ಹೆಚ್ಚು ಮಕ್ಕಳ ಭಾಗವಹಿಸುವಿಕೆ
ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸುಳ್ಯ, ರೋಟರಿ ಸುಳ್ಯ, ಇಂಟರ್ಯಾಕ್ಟ್ ಕ್ಲಬ್, ರೋಟರಿ ಶಾಲೆ ಮಿತ್ತಡ್ಕ, ಸುದ್ದಿ ಬಿಡುಗಡೆ ಪತ್ರಿಕೆ, ಸುದ್ದಿ ವೆಬ್ಸೈಟ್ ಹಾಗೂ ಸುದ್ದಿ ಚಾನೆಲ್ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ ಸುಳ್ಯ ತಾಲೂಕು ಮಟ್ಟದ ಚಿತ್ರಕಲಾಸ್ಪರ್ಧೆ ವರ್ಣ ಚಿತ್ತಾರ 2024 ಸ್ಪರ್ಧೆಯು ನ.3 ರಂದು ರೋಟರಿ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ನಡೆಯಿತು.
ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕ ಪ್ರಭಾಕರನ್ ನಾಯರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ” ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಲು ಇದು ಸಹಕಾರಿ. ಮಕ್ಕಳು ಎಷ್ಟು ಎತ್ತರಕ್ಕೆ ಬೆಳೆದರೂ ಹಿರಿಯರನ್ನು ಕಡೆಗಣಿಸಬೇಡಿ” ಎಂದು ಕಿವಿಮಾತು ಹೇಳಿದರು.
ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಮತಿ ಯೋಗಿತಾ ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ ಸ್ಥಾನದಿಂದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು. ಪಿ. ಶಿವಾನಂದ ಮಾತನಾಡಿ, ” ಶ್ರೀಹರಿ ಪೈಂದೋಡಿ ಹಾಗೂ ಪ್ರಸನ್ನ ಐವರ್ನಾಡುರವರ ಶ್ರಮದಿಂದ ವರ್ಣ ಚಿತ್ತಾರ ದಿನದಿಂದ ದಿನಕ್ಕೆ ಯಶಸ್ವಿಯಾಗುತ್ತಿದೆ. ಕಲಾಪ್ರಕಾರಗಳಲ್ಲಿ ಭಾಗವಹಿಸುವುದರಿಂದ ಸಮಾಜದಲ್ಲಿ ದ್ವೇಷ, ಅಸೂಯೆ ಕಡಿಮೆಯಾಗಲು ಸಹಕಾರಿ” ಎಂದರು.
ಉದ್ಯಮಿ ಆನಂತ್ ರಾಜ್ ಮೈಪನ ಮಾತನಾಡಿ, ಓದಿನೊಂದಿಗೆ ಹವ್ಯಾಸ ಬೆಳೆಸಿಕೊಳ್ಳಿ.,ಪೋಷಕರು ಮಕ್ಕಳನ್ನು ಇತರ ಕಲಾ ಪ್ರಕಾರದ ತರಗತಿಗಳಿಗೆ ಕಳುಹಿಸುವುದರಿಂದ ಮಕ್ಕಳ ಬೆಳವಣಿಗೆಯಲ್ಲಿ ಅಭಿವೃದ್ಧಿಯಾಗಲಿದೆ” ಎಂದರು.
ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ಡಾ. ಕೇಶವ ಪಿ. ಕೆ., ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕ ಹಾಗೂ ಕಲಾವಿದ ಚಂದ್ರ ಅಡ್ಕಾರು, ಮತ್ತು ಉದ್ಯಮಿ ಅನಂತ ರಾಜ್ ಮೈಪನವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೋಟರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೋಹಿಣಿ ಅಂಬೆಕಲ್ಲು, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷೆ ಕು. ಹಿಮನಿ ಎ.ಎಸ್ ಗೌರವ ಉಪಸ್ಥಿತರಿದ್ದರು.
ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ನ ಶ್ರೀಹರಿ ಪೈಂದೋಡಿ ಸ್ವಾಗತಿಸಿ, ಪ್ರಸನ್ನ ಐವರ್ನಾಡು ವಂದಿಸಿದರು. ರೋಟರಿ ಶಾಲಾ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.