ಮುರುಳ್ಯ ಗ್ರಾಮದ ಹುದೇರಿ ಪಡ್ದಂಬೈಲು ದಿ. ಆನಂದ ಗೌಡರ ಪತ್ನಿ ಶ್ರೀಮತಿ ಸರಸ್ವತಿಯವರು ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನ.2ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.















ಅವರು ಪ್ರಗತಿ ಕೃಷಿಕರಾಗಿಯೂ ಶ್ರಮಜೀವಿಯಾಗಿ ಜನಾನುರಾಗಿದ್ದರು. ಮೃತರು ಪುತ್ರ,ಮುರುಳ್ಯ ಗ್ರಾಮ ಪಂಚಾಯತ್ ಸದಸ್ಯ ಕರುಣಾಕರ ಗೌಡ ಪಡ್ಡಂಬೈಲು, ಪುತ್ರಿ ಶ್ರೀಮತಿ ಮೀನಾಕ್ಷಿ ಲಿಂಗಪ್ಪ ಗೌಡ , ಸೊಸೆಯಂದಿರಾದ ಪ್ರೇಮ, ವಸಂತಿ, ಮೊಮ್ಮಕ್ಕಳು, ಮರಿ ಮಕ್ಕಳು, ಕುಟುಂಬಸ್ಥರು , ಬಂಧು ಮಿತ್ರರನ್ನು ಅಗಲಿದ್ದಾರೆ.










