ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಹರೀಶ್ ಭಟ್ ಎಂಬವರು ದೇವಸ್ಥಾನದ ಮೆನೇಜರ್ ಕೃಷ್ಣ ಭಟ್ ಎಂಬವರ ಮೇಲೆ ಪೊಲೀಸ್ ದೂರು ನೀಡಿದ ಘಟನೆ ನ.3 ರಂದು ನಡೆದಿದೆ.
ತಾನು ಸಂಬಳ ಕೇಳಿದಾಗ ಮೇನೇಜರ್ ಕೃಷ್ಣ ಸೋಮಯಾಜಿಯವರು ನನಗೆ ಹೊಡೆದು ಹೊರಗೆ ಹಾಕುವುದಾಗಿ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಕೃಷ್ಣ ಸೋಮಯಾಜಿಯವರಲ್ಲಿ ವಿಚಾರಿಸಿದಾಗ ” ನಾನು ಹರೀಶ್ ಭಟ್ ರವರಿಗೆ ಹೊಡೆಸುವುದಾಗಿ ಹೇಳಿಲ್ಲ. ಅವರು ಏನೆಲ್ಲ ಮಾತಾಡಿದಾಗ ನಿಮಗೆ ಪೆಟ್ಟೇ ಮದ್ದು ಎಂದು ಹೇಳಿದ್ದೇನೆ” ಎಂದು ತಿಳಿಸಿದ್ದಾರೆ.