ಈ ಆಧುನಿಕ ಕಾಲಘಟ್ಟದಲ್ಲಿ ಎಲ್ಲವೂ ಇಂಗ್ಲೀಷ್ ಮಯವಾಗಿದೆ. ಅನೇಕ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆಂಗ್ಲ ಮಾಧ್ಯಮದತ್ತ ಮುಖ ಮಾಡುತ್ತಿದ್ದಾರೆ. ಜನರ ಒಲವು ಸರಕಾರಿ ಅಂಗನವಾಡಿ ಅಥವಾ ಶಾಲೆಗಳತ್ತ ಮೂಡಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಅಂಗನವಾಡಿಗಳ ಉಳಿಸಬೇಕು ಹಾಗೂ ಈ ಕಾರ್ಯಕ್ಕೆ ನನ್ನದೊಂದು ಪುಟ್ಟ ಅಳಿಲು ಸೇವೆ ಎಂದು ನಟಿ ಹೇಮಾ ಮೋಟ್ನೂರು ಹೇಳಿದರು.
ಇವರು ಅಂಗನವಾಡಿ ಕೇಂದ್ರ ಬಳ್ಳಕ ಇಲ್ಲಿನ ಪುಟಾಣಿಗಳಿಗೆ ಕೊಡೆ ವಿತರಿಸಿ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೇಮಾ ಮೋಟ್ನೂರು ಅವರ ತಾಯಿ ಸೋಮಕ್ಕ , ಯುವ ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಪವಿತ್ರ ಧನಂಜಯ, ಮಾಜಿ ಗ್ರಾ.ಪಂ ಸದಸ್ಯೆ ಮಿತ್ರಕುಮಾರಿ ಚಿಕ್ಮುಳಿ, ಅಂಗನವಾಡಿ ಸಹಾಯಕಿ ಲಕ್ಷ್ಮೀ ನಾರಾಯಣ ನಾಯ್ಕ, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಲತಾ ಅಂಬೆಕಲ್ಲು ನಿರೂಪಿಸಿದರು.