ಮಂಗಳೂರಿನಲ್ಲಿ ಮೆಸ್ಕಾಂ ಎಂ.ಡಿ ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ

0

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಂಗಳೂರಿನ ಬಿಜೈಯಲ್ಲಿ ಮೆಸ್ಕಾಂ ಎಂ.ಡಿ. ಪದ್ಮಾವತಿ ಅವರನ್ನು ನ.5ರಂದು ಭೇಟಿಯಾಗಿ ಸುಳ್ಯದ ವಿದ್ಯುತ್ ಸಮಸ್ಯೆ ಕುರಿತು ಮಾತುಕತೆ ನಡೆಸಿದರು.

ಮುಖ್ಯವಾಗಿ 110 ಕೆ.ವಿ. ನೂತನ ಲೈನ್ ಕಾಮಗಾರಿ, ಸುಳ್ಯಕ್ಕೆ ಕಾವು – ಜಾಲ್ಸೂರು ಲೈನ್ ಕಾಮಗಾರಿ ನಡೆಯುತ್ತಿದ್ದು ತಕ್ಷಣವೇ ಮುಗಿಸಿ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಮತ್ತು ಸುಳ್ಯಕ್ಕೆ ತುರ್ತು ಪರಿಸ್ಥಿತಿಯಲ್ಲಿ ವಿದ್ಯುತ್ ಪೂರೈಸಲು ಬೆಳ್ಳಾರೆ- ಪೈಚಾರು ಮೂಲಕ ಹೊಸ ಲೈನ್ ನ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವಂತೆ ಹಾಗೂ ಕಡಬ ಭಾಗದ ಅಲಂಕಾರು ಎಂಬಲ್ಲಿ ಹೊಸ 110 ಕೆ.ವಿ. ಸ್ಟೇಷನ್ ನ ಸರ್ವೆ ಕಾರ್ಯವನ್ನು ಬೇಗ ಮುಗಿಸಿ ವರದಿಸಲ್ಲಿಸುವಂತೆ ತಿಳಿಸಲಾಯಿತು.


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕಡೆಂಜಿ, ಸುಳ್ಯ ಮಂಡಲ ಪ್ರಧಾನಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ಉಪಸ್ಥಿತರಿದ್ದರು.