ಒಡಿಯೂರು ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿಯವರಿಂದ ಆಶೀರ್ವಚನ
ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ನಗರ ಸುಳ್ಯ ಪ್ರಖಂಡ ಇದರ ವತಿಯಿಂದ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ 2 ನೇ ವರ್ಷದ ಸಾರ್ವಜನಿಕ ಗೋಪೂಜೆಯು ನ. 9 ರಂದು ಸಂಜೆ ನಡೆಯಲಿರುವುದು.
ಸಂಜೆ ಗಂಟೆ 5 ರಿಂದ ಚೆನ್ನಕೇಶವ ದೇವರಕಟ್ಟೆ ರಥ ಬೀದಿಯಿಂದ ಮಹಿಳೆಯರ ಪೂರ್ಣ ಕುಂಭ ಸ್ವಾಗತ ಹಾಗೂ ಸ್ಥಳೀಯ ಭಜಕರಿಂದ ಕುಣಿತ ಭಜನೆ ಯೊಂದಿಗೆ ಆಕರ್ಷಕ ಮೆರವಣಿಗೆಯು ಚೆನ್ನಕೇಶವ ದೇವಸ್ಥಾನದ ಮುಂಭಾಗಕ್ಕೆ ಸಾಗಿ ಬರಲಿದೆ.
ಬಳಿಕ ಗಂಟೆ 6.05 ರಿಂದ ಸಾರ್ವಜನಿಕ ಗೋಪೂಜೆ ಯುಪ್ರಾರಂಭವಾಗಲಿರುವುದು. ಈ ಸಂದರ್ಭದಲ್ಲಿ ವಿಶೇಷವಾಗಿ ಭಜನಾ ತಂಡದವರಿಂದ ಆಕರ್ಷಕ ಕುಣಿತ ಭಜನೆಯು ನೆರವೇರಲಿದೆ.
ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮವು ವಿಶ್ವ ಹಿಂದೂ ಪರಿಷದ್ ಸುಳ್ಯ ನಗರ ಅಧ್ಯಕ್ಷ ಉಪೇಂದ್ರ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು. ಒಡಿಯೂರು ಕ್ಷೇತ್ರದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ
ಯವರು ಉಪಸ್ಥಿತರಿದ್ದು ಗೋ ಭಕ್ತ ವೃಂದಕ್ಕೆ ಆಶೀರ್ವಚನ ನೀಡಲಿದ್ದಾರೆ.
ಶಾರದಾಂಬ ಉತ್ಸವ
ಸಮಿತಿ ಅಧ್ಯಕ್ಷ ಡಾ. ಡಿ.ವಿ ಲೀಲಾಧರ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ವಿಶ್ವ ಹಿಂದೂ ಪರಿಷದ್ ದಕ್ಷಿಣ ಪ್ರಾಂತದ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯ.ಸ.ಅಧ್ಯಕ್ಷ ತೀರ್ಥ ಕುಮಾರ್ ಕುಂಚಡ್ಕ, ಸುಳ್ಯ ಯೋಜನಾಧಿಕಾರಿ ಮಾಧವ ಗೌಡ, ಬೊಳಿಯಮಜಲು ಸಂಸ್ಕೃತಿ ಚಾರಿಟೇಬಲ್ ಟ್ರಸ್ಟಿನ ಜಯರಾಮ ಬೊಳಿಯಮಜಲು, ಬಜರಂಗದಳ ಪುತ್ತೂರು ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ರೂಪೇಶ್ ಪೂಜಾರಿಮನೆ, ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಪ್ರಧಾನ ಕಾರ್ಯದರ್ಶಿ ನವೀನ್ ಎಲಿಮಲೆ, ಬಜರಂಗದಳ ಸುಳ್ಯ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ, ಬಜರಂಗದಳ ಗೋರಕ್ಷಾ ಪ್ರಮುಖ್ ರಾಜೇಶ್ ಕಲ್ಲುಮುಟ್ಲು ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಗೋ ಭಕ್ತರಿಗೆ ಸ್ವತಃ ಗೋಪೂಜೆ ಮಾಡುವ ಮುಕ್ತ ಅವಕಾಶವನ್ನು ನೀಡಲಾಗುವುದು ಹಾಗೂ ಆಗಮಿಸಿದ ಎಲ್ಲರಿಗೂ ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.