ಫ್ರೆಂಡ್ಶಿಫ್ ಟ್ರೋಫಿ ಸೀಸನ್ -4 ದೀಪಾವಳಿ ಪ್ರಯುಕ್ತ ಪಡ್ಡಂಬ್ಯೆಲು ಅಡ್ಕ ಮೈದಾನದಲ್ಲಿ ನ.3ರಂದು ನಡೆಯಿತು.
ಫ್ರೆಂಡ್ಶಿಪ್ ಟ್ರೋಪಿ ಇದರ ರೂವಾರಿ ಲೋಕೇಶ್ ಪಡ್ಡಂಬ್ಯೆಲ್ ಮತ್ತು ಸಂಘಟನ ಸಮಿತಿ ಈ ಕಾರ್ಯಕ್ರಮವನ್ನು ಆಯೋಜಿಸಿದರು.
ಐದು ತಂಡಗಳ ಓವರ್ ಆರ್ಮ್ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದ ಐದು ತಂಡಗಳಲ್ಲಿ ಸುಳ್ಯ ಮತ್ತು ಮಡಿಕೇರಿ ಭಾಗದ ಒಬ್ಬೊಬ್ಬರು ಐಕಾನ್ ಆಟಗಾರರಿದ್ದರು. ವಿನಯ್ ನಾರಾಲು ಮಾಲೀಕತ್ವದ “ಶ್ರೀ ವಿಷ್ಣು ಕ್ರಿಕೆಟರ್ಸ್ ” ಚಾಂಪಿಯನ್ ತಂಡವಾದರೆ, ಬಾಲಕೃಷ್ಣ ಪಿ.ಜಿ ಪಡ್ಡಂಬ್ಯೆಲು ಮಾಲೀಕತ್ವದ “ಥಂಡರ್ ಸ್ಟ್ರೈಕರ್ಸ್” ರನ್ನರ್ ಅಪ್ ಟ್ರೋಪಿ ತಮ್ಮ ಮಡಿಲಿಗೆ ಹಾಕಿಕೊಂಡರು. ಹಾಗೆಯೇ ಅಶೋಕ್ ಪಡ್ಡಂಬ್ಯೆಲು ಮಾಲಕತ್ವದ ‘ಪವರ್ ಹಿಟರ್ಸ್’,ವಿಫುಲ್ ನೀರ್ಪಾಡಿ ಮಾಲಕತ್ವದ ‘ಡೆಕ್ಕನ್ ವಾರಿಯರ್ಸ್’ ಮತ್ತು ಪ್ರಜ್ವಲ್ ಮಾಲಕತ್ವದ ‘ದೀ ಕರ್ಲಪ್ಪಾಡಿ ಪ್ಯಾಂಥರ್ಸ್’ ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು.
ಲೆಜೇಂಡ್ಸ್ ತಂಡಗಳಾಗಿ ಭಾಗವಹಿಸಿದ ರಂಜನ್ ಪಡ್ಡಂಬ್ಯೆಲು ಮಾಲಕತ್ವದದ ತಂಡವನ್ನು ಮಣಿಸಿ ರೂಪಾನಂದ ಕರ್ಲಪ್ಪಾಡಿಯವರ ತಂಡವು ವಿಜಯಿಯಾಯಿತು.
ಮಹಿಳೆಯರಿಗೆ, ಮಕ್ಕಳಿಗೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆದವು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಕುಮಾರಿ ಭಾಗೀರಥಿ ಮುರುಳ್ಯ ಮಾನ್ಶ ಶಾಸಕರು ಸುಳ್ಯ ವಿಧಾನಸಭಾ ಕ್ಷೇತ್ರ ಇವರು ದೀಪಾವಳಿಯ ಶುಭಾಶಯ ಕೋರಿ ಊರಿನ ಯುವಕರ ಸಾಧನೆಯನ್ನು ಮೆಚ್ಚಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತ ಬನ್ನಿ, ಊರಿನ ಸಮಸ್ತರ ಒಗ್ಗಟ್ಟಿಗೆ ಪ್ರಸಂಶೆ ವ್ಯಕ್ತಪಡಿಸಿ ಆಟದ ಮ್ಯೆದಾನಕ್ಕೆ ಈ ಊರಿನ ಸಮಸ್ಯೆಗಳಿದ್ದರೆ ಸದಾ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ರವಿರಾಜ್ ಕರ್ಲಪ್ಪಾಡಿ, ಶ್ರೀಮತಿ ದಿವ್ಯಜಯರಾಮ್ ಪಡ್ಡಂಬ್ಯೆಲು, ಯಂಗ್ ಬ್ರದರ್ಸ್ ಕ್ರೀಡಾ ಮತ್ತು ಕಲಾ ಸಂಘ ಪಡ್ಡಂಬ್ಯೆಲು ಇದರ ಅಧ್ಯಕ್ಷರಾದ ದೇವರಾಜ್ ಪಡ್ಡಂಬ್ಯೆಲು, ಪುರುಷೋತ್ತಮ ಕರ್ಲಪ್ಪಾಡಿ, ಪ್ರಥಮ ಟ್ರೋಪಿ ದಾನಿಗಳಾದ ಚಂದ್ರಕಲಾ ಇಂದ್ರನಾಥ ಕರ್ಲಪ್ಪಾಡಿ ದ್ವಿತೀಯ ಟ್ರೋಪಿ ದಾನಿಗಳಾದ ಯತೀಶ್ ಪಡ್ಡಂಬ್ಯೆಲು ಮತ್ತು ಐದು ತಂಡಗಳ ಮಾಲಕರುಗಳಾದ ಬಾಲಕೃಷ್ಣ ಪಡ್ಡಂಬ್ಯೆಲು, ವಿನಯ್ ನಾರಾಲು, ವಿಫುಲ್ ನೀರ್ಪಾಡಿ, ಅಶೋಕ್ ಪಡ್ಡಂಬ್ಯೆಲು ಮತ್ತು ಪ್ರಜ್ವಲ್ ಕರ್ಲಪ್ಪಾಡಿ ಉಪಸ್ಥಿತರಿದ್ದರು.
ಪಡ್ಡಂಬ್ಯೆಲು ಮನೆತನದಲ್ಲಿ ಹುಟ್ಟಿ ಈ ಭಾಗದ ಮಕ್ಕಳಿಗೆ ಕ್ರೀಡಾ ಸ್ಪೂರ್ತಿ ಬೆಳಗಿಸಿದದ ಮತ್ತು ದ್ಯೆಹಿಕ ಶಿಕ್ಷರಾಗಿ ಸೇವೆ ಸಲ್ಲಿಸಿ ಸಾಧನೆಗೈದ ದೇವರಾಜ್ ಪಡ್ಡಂಬ್ಯೆಲುರವರನ್ನು ಸನ್ಮಾನಿಸಲಾಯಿತು ಅದೇ ಈ ರೀತಿ ಈ ಪಂದ್ಯಾಕೂಟದ ಯಶಸ್ವಿಗೆ ಸಹಕರಿಸಿದ ಪುರುಷೋತ್ತಮ ಕರ್ಲಪ್ಪಾಡಿ, ಜಯರಾಮ್ ಪಿ.ಎಸ್ ಪಡ್ಡಂಬ್ಯೆಲ್, ನಿಖಿಲ್ ಮಣಿಮನೆ, ಸುನಿಲ್ ಅರುಣಗುಂಜ ಇವರನ್ನು ಸಂಘಟನಾ ಸಮಿತಿ ಪರವಾಗಿ ಗೌರವಿಸಲಾಯಿತು.
ಆಯೋಜಕರು ಆಯೋಜಿಸಿದ ಅದೃಷ್ಟ ಚೀಟಿಯ ಪ್ರಥಮ ಬಹುಮಾನವನ್ನು ಜಯರಾಮ ಬಾಳಿಲ ಮತ್ತು ದ್ವಿತೀಯ ಬಹುಮಾನವನ್ನು ಪ್ರಕಾಶ್ ಪುರ ಮರ್ಕಂಜ ಪಡೆದು ಕೊಂಡರು.
ಸಮಿತಿ ಸದಸ್ಯರುಗಳಾದ ರೂಪಾನಂದ ಕರ್ಲಪ್ಪಾಡಿ, ಹೇಮನಾಥ್ ಪಡ್ಡಂಬ್ಯೆಲು, ಶರತ್ ನಾಂಗುಳಿ, ದಿನೇಶ್ ಪಡ್ಡಂಬ್ಯೆಲು, ಯತೀಶ್ ಪಡ್ಡಂಬ್ಯೆಲು, ವಿನೋದ್ ಪಡ್ಡಂಬ್ಯೆಲು ಉಪಸ್ಥಿತರಿದ್ದು ದಿನೇಶ್ ನಾಂಗುಳಿ ಅಥಿತಿಗಳನ್ನು ಸ್ವಾಗತಿಸಿ, ಲೋಕೇಶ್ ಪಡ್ಡಂಬ್ಯೆಲು ವಂದಿಸಿ, ಬಾಲಕೃಷ್ಣ ಪಡ್ಡಂಬ್ಯೆಲು ಕಾರ್ಯಕ್ರಮ ನಿರೂಪಿಸಿದರು.