ಪಂಜ ಲಯನ್ಸ್ ಭವನದಲ್ಲಿ ದೀಪಾವಳಿ ಸಂಭ್ರಮ-ಕುಟುಂಬ ಸಮ್ಮಿಲನ

0

ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ದೀಪಾವಳಿ ಸಂಭ್ರಮ ಹಾಗೂ ಕುಟುಂಬ ಸಮ್ಮಿಲನ ನ.6 ರಂದು ಸಂಜೆ ಪಂಜ ಲಯನ್ಸ್ ಭವನದಲ್ಲಿ ನಡೆಯಿತು.
ಜಿಲ್ಲಾ-ಕ್ಲಬ್‌ ಪುನಶ್ಚೇತನ ಪ್ರಧಾನ ಸಂಯೋಜಕ PMJF D1 ಲI ವಿಜಯವಿಷ್ಣು ಮಯ್ಯ ಉದ್ಘಾಟಿಸಿ ಮಾತನಾಡಿ “ಸಮಾಜ ಸೇವೆಯ ನಿಟ್ಟಿನಲ್ಲಿ ನಾವಿಲ್ಲಿ ಬಂದಿದ್ದೇವೆ. ದೀಪಾವಳಿ ಬೆಳಕಿನ ಪ್ರಜ್ವಲತೆ ನಮ್ಮ, ನಿಮ್ಮಿಂದ ಪಸರಿಸಿ ಬೇರೆಯವರ ಜೀವನಕ್ಕೆ ದಾರಿ ದೀಪ ಮಾಡುವ. ಸಹಾಯ ಕೇಳಿ ಬಂದವನಿಗೆ , ಆತನಿಗೆ ಆಗತ್ಯ ಇದ್ದರೆ ನಮ್ಮಿಂದ ಆಗುವ ಸಹಾಯ ಮಾಡುವ. ಆಗ ಅವರಿಂದ ಕಂಡು ಬರುವ ಸಂತೃಪ್ತಿ,ಧನ್ಯತಾ ಭಾವವು. ಅದರಲ್ಲಿ ನಮಗೆ ನಿಜವಾದ ಸಂತೋಷ ಯ‌ಶಸ್ಸು ದೊರಕುವುದು”.ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಲI ಶಶಿಧರ್ ಪಳಂಗಾಯ ಸಭಾಧ್ಯಕ್ಷತೆ ವಹಿಸಿದ್ದರು.

‘ದೀಪಾವಳಿ ಆಚರಣೆ ಮತ್ತು ಪ್ರಸ್ತುತತೆ’ ವಿಷಯದ ಕುರಿತು ಸುಳ್ಯ ಕೆ ವಿ ಜಿ ಐಟಿಐ ಉಪನ್ಯಾಸಕ ಭವಾನಿ ಶಂಕರ ಆಡ್ತಲೆ ಪ್ರಧಾನ ಭಾಷಣ ಮಾಡಿ. “ಹಬ್ಬಗಳ ಆಚರಣೆ ಹಿನ್ನೆಲೆಗಳನ್ನು ತಿಳಿದಿರ ಬೇಕು.ಪೂರ್ವಜರ ಆಚರಣೆಗಳನ್ನು. ಪೂರ್ವಜರು ಬಿಟ್ಟು ಹೋದ ಸಂಸ್ಕಾರ ಸಂಸ್ಕೃತಿಗಳನ್ನು ನಾವು ಹಿರಿಯರು ಪಾಲಿಸ ಬೇಕು. ಅವುಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡ ಬೇಕು” ಎಂದು ಹೇಳಿದರು. ಕಾರ್ಯಕ್ರಮ ಸಂಯೋಜಕ ಲI ಸೀತಾರಾಮ ಗೌಡ ಕುದ್ವ, ಪಂಜ ಲಯನ್ಸ್ ಕ್ಲಬ್ ನಿಕಟಪೂರ್ವಾಧ್ಯಕ್ಷ ಲI ದಿಲೀಪ್ ಬಾಬ್ಲುಬೆಟ್ಟು, ಕಾರ್ಯದರ್ಶಿ ಲIಮೋಹನ್ ದಾಸ್ ಕೂಟಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಕಾರ್ಯಕ್ರಮದ ಸಂಯೋಜಕ, ಪ್ರಾಯೋಜಕ ಲIಸೀತಾರಾಮ ಗೌಡ ಕುದ್ವ ಮತ್ತು ಅವರ ಮನೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಲI ವಾಸುದೇವ ಮೇಲ್ಪಾಡಿ ವೇದಿಕೆಗೆ ಆಹ್ವಾನಿಸಿದರು. ಲI ಪ್ರಶಾಂತ್ ಮುರುಳ್ಯ ಲಯನ್ಸ್ ಪ್ರಾರ್ಥನೆ ಮಾಡಿದರು. ಲI
ಕುಮಾರ ಸ್ವಾಮಿ ಕಿನ್ನಿಕುಮೇರಿ ಧ್ವಜ ವಂದನೆ ಮಾಡಿದರು. ಲIಸೀತಾರಾಮ ಗೌಡ ಕುದ್ವ ಪ್ರಾಸ್ತಾವಿಕ ಗೈದು ಸ್ವಾಗತಿಸಿದರು. ಲIಪುರಂದರ ಪನ್ಯಾಡಿ , ಲI ಕರುಣಾಕರ ಎಣ್ಣೆಮಜಲು ಅತಿಥಿಗಳನ್ನು ಪರಿಚಯಿಸಿದರು. ಲIಮೋಹನ್ ದಾಸ್ ಕೂಟಾಜೆ ವಂದಿಸಿದರು.

ದೀಪಾವಳಿ ಸಂಭ್ರಮದಲ್ಲಿ ಲಯನ್ಸ್ ಭವನವನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಹಣತೆ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಬ್ಬದ ವಿಶೇಷ ಭೋಜನ ಕೂಟ ನಡೆಯಿತು.