ಸುದ್ದಿ ವರದಿ ಫಲಶ್ರುತಿ: ಹೆದ್ದಾರಿ ಬದಿಯ ಅಪಾಯಕಾರಿ ಹೊಂಡವನ್ನು ಮುಚ್ಚಿದ ಇಲಾಖೆ

0

ಮಾಣಿ ಮೈಸೂರು ಹೆದ್ದಾರಿ ಕುಂಬರ್ಚೋಡು ಸಮೀಪ ರಸ್ತೆ ಬದಿ ದೊಡ್ಡ ಹೊಂಡ ನಿರ್ಮಾಣವಾಗಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ ಎಂಬ ವರದಿಯನ್ನು ಸುದ್ದಿ ಪತ್ರಿಕೆ ಮತ್ತು ವೆಬ್ಸೈಟ್ ಮೂಲಕ ವರದಿ ಮಾಡಲಾಗಿತ್ತು.

ಇದೀಗ ವರದಿಗೆ ಸ್ಪಂದಿಸಿರುವ ಹೆದ್ದಾರಿ ಇಲಾಖೆ ಗುಂಡಿಯನ್ನು ಮುಚ್ಚಿ ಉಂಟಾಗಬಹುದಾಗಿದ್ದ ಅಪಾಯವನ್ನು ತಪ್ಪಿಸಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಈ ಭಾಗದಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದು ವೇಗವಾಗಿ ಬರುವ ವಾಹನಗಳಿಗೆ ಈ ಅಪಾಯಕಾರಿ ಗುಂಡಿ ಇನ್ನೂ ಹೆಚ್ಚು ಅನಾಹುತಕ್ಕೆ ಕಾರಣವಾಗಿತ್ತು.

ಆದ್ದರಿಂದ ಸಂಭಂದಪಟ್ಟವರು ಕೂಡಲೇ ಸ್ಪಂದಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಅಗ್ರಹಿಸಿದ್ದರು.