ಮಂಗಳೂರಿನ ಆಸ್ಪತ್ರೆಯಲ್ಲಿ ಮೃತ ಪಟ್ಟ ಅಭಿಲಾಷ್ ರವರ ಪಾರ್ಥಿವ ಶರೀರ ನಾಳೆ ಬೆಳಗ್ಗೆ ಕೋಲ್ಚಾರಿಗೆ ಬರಲಿದ್ದು ಅಂತ್ಯ ಸಂಸ್ಕಾರವನ್ನು ಕೊಲ್ಲರಮೂಲೆ ಮನೆಯಲ್ಲಿ ನೆರವೇರಿಸುವುದಾಗಿ ಮೃತರ ಬಂಧುಗಳು ತಿಳಿಸಿರುತ್ತಾರೆ.
ಬೆಳಗ್ಗೆ ಗಂಟೆ 9.00 ರಿಂದ ಅಂತಿಮ ದರ್ಶನಕ್ಕೆ ಕೊಲ್ಲರಮೂಲೆ ಮನೆಯಲ್ಲಿ ಅವಕಾಶವಿರುವುದಾಗಿ ತಿಳಿಸಿದರು.
ಮೃತರು ಹಲವಾರು ಸಂಘಟನೆಗಳಲ್ಲಿಯೂ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು.
ಜೆ.ಎಫ್.ಸಿ.ಟೈಗರ್ಸ್ ಆಲೆಟ್ಟಿಯ ಅಧ್ಯಕ್ಷರಾಗಿದ್ದು ಸುಳ್ಯ ದಸರಾ ಉತ್ಸವದ ಅಂಗವಾಗಿ ಆಲೆಟ್ಟಿಯಲ್ಲಿ ನಡೆದ ಪಿಲಿರಂಗ್ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.
ಸುಳ್ಯದಲ್ಲಿ ಫಾರ್ಚುನ್ ವಾಹಿನಿಯನ್ನು ಕೆಲ ವರ್ಷಗಳ ಹಿಂದೆ ಪ್ರಾರಂಭಿಸಿದ್ದರು.