ಪಂಜ ಸೀಮೆಯ ದೇವಳದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೇವಳದ ಅಭಿವೃದ್ಧಿ ಕಾರ್ಯಗಳ ಕುರಿತು ಒಂದು ದಿನದ ತಾಂಬೂಲ ಪ್ರಶ್ನಾ ಚಿಂತನೆ ನ.13 ರಂದು ದೈವಜ್ಞ ನಾರಾಯಣ ರಂಗಾ ಭಟ್ ಮಧೂರು ರವರಿಂದ ಮುಂಜಾನೆಯಿಂದ ಆರಂಭ ಗೊಂಡಿದೆ.

ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಪರವಾಗಿ ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಸದಸ್ಯರಾದ ಸತ್ಯರಾಯಣ ಭಟ್ ಕಾಯಂಬಾಡಿ, ರಾಮಚಂದ್ರ ಭಟ್ , ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಕಾಚಿಲ ಮರಕಡ, ಮಾಯಿಲಪ್ಪ ಗೌಡ ಎಣ್ಮೂರು, ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ, ಶ್ರೀಮತಿ ಮಾಲಿನಿ ಕುದ್ವ, ಶ್ರೀಮತಿ ಪವಿತ್ರ ಮಲ್ಲೆಟಿ, ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ ಕಂಬಳ,ಪರಮೇಶ್ವರ ಬಿಳಿಮಲೆ , ಸೀಮೆಯ ಭಕ್ತಾದಿಗಳು, ಅರ್ಚಕರು,ದೇವಳ ಸಿಬ್ಬಂದಿಗಳು ಉಪಸ್ಥಿತರಿದ್ದರು.