ನ.17 ರಂದು ಗುತ್ತಿಗಾರಿನಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ

0

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಮತ್ತು
ಕೆ. ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ, ದೇರಳಕಟ್ಟೆ-ಮಂಗಳೂರು
ಇವರ ಸಹಭಾಗಿತ್ವದಲ್ಲಿ ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವದ ಅಂಗವಾಗಿ
ಬೃಹತ್ ಉಚಿತ ವೈದ್ಯಕೀಯ ಶಿಬಿರ ನ.17 ರಂದು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ
ನಡೆಯಲಿದೆ.

ಸಹಕಾರಿ ಸಂಘದ ವೆಂಕಟ್ ದಂಬೆಕೋಡಿ ಅಧ್ಯಕ್ಷತೆ
ವಹಿಸಿದ್ದರು. ಉದ್ಯಮಿ ಉಮೇಶ್ ಮುಂಡೋಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಶಿಬಿರದಲ್ಲಿ ಮಕ್ಕಳ ರೋಗ ತಪಾಸಣೆ ,ಸಾಮಾನ್ಯ ರೋಗ ತಪಾಸಣೆ,ಮಧುಮೇಹ ಪರೀಕ್ಷೆ
ಕಿವಿ,ಮೂಗು, ಗಂಟಲು ತಪಾಸಣೆ,
ರಕ್ತದೊತ್ತಡ ಪರೀಕ್ಷೆ, ಎಲುಬು ಮತ್ತು ಕೀಲು ತಪಾಸಣೆ,
ಔಷಧ ವಿತರಣೆ ಮತ್ತು ಅಗತ್ಯವಿರುವವರಿಗೆ E.C.G, ಚರ್ಮರೋಗ ತಪಾಸಣೆ ಸೌಲಭ್ಯ ಇರಲಿದೆ.