ಸುಳ್ಯ ಕೆ ಎಸ್ ಅರ್ ಟಿ ಸಿ ಬಸ್ ನಿಲ್ದಾಣದಲ್ಲಿ ಹೀಗೂ ಒಂದು ಸುದ್ದಿ

0

ಬಾಯಿ ತೆರದು ನಿಂತ ಗುಂಡಿಯನ್ನು ಮುಚ್ಚದೇ ಅದರಲ್ಲಿ ಫಲಕ ನೆಟ್ಟು ಜಾಗೃತಿ

ಸುಳ್ಯ ಕೆ ಎಸ್ ಅರ್ ಟಿ ಸಿ ಬಸ್ಸು ನಿಲ್ದಾಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಂಡು ಬರುತಿದ್ದ ಅಪಾಯಕಾರಿ ಗುಂಡಿಯನ್ನು ಮುಚ್ಚುವ ಬದಲು ಅದಕ್ಕೆ ಖಾಸಗಿ ವಾಹನಗಳು ಬರಬಾರದೆಂಬ ಸೂಚನಾ ಫಲಕವನ್ನು ಹಾಕಿ ಸಾರ್ವಜನಿಕರ ಆಕ್ರೋಶಕ್ಕೆ ಮತ್ತು ನಗೆ ಪಾಟಲಿಗೆ ಕಾರಣವಾಗಿದೆ.

ನಿಲ್ದಾಣದ ಮುಖ್ಯ ದ್ವಾರದಲ್ಲಿ ಈ ಅಪಾಯಕಾರಿ ಗುಂಡಿ ಇದ್ದು ಈ ಪ್ರದೇಶದಲ್ಲಿ ಹೆಚ್ಚಾಗಿ ಕೊಯಿನಾಡು,ಕಾಸರಗೋಡು ಭಾಗಕ್ಕೆ ತೆರಳುವ ಬಸ್ಸುಗಳು ನಿಲ್ಲುವ ಜಾಗ ವಾಗಿದೆ.
ಈ ಹಿನ್ನಲೆಯಲ್ಲಿ ಇಲ್ಲಿ ಜಾಗವು ಕೂಡ ಕಡಿಮೆ ಇದ್ದು ಇದನ್ನು ಸರಿ ಪಡಿಸಲು ಗುಂಡಿಯನ್ನು ಮುಚ್ಚುವ ಬದಲು ಇದಕ್ಕೆ ಸೂಚನ ಫಲಕ ಹಾಕಿರುವುದು ಎಷ್ಟು ಸರಿ ಎಂದು ಸಾರ್ವಜನಿಕರ ಪ್ರಶ್ನೆ ಯಾಗಿದೆ.