ಬೊಳುಬೈಲಿನಲ್ಲಿ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಟಿಪ್ಪರ್ ಲಾರಿ ಸುಳ್ಯ ಮೆಸ್ಕಾಂ ಕಚೇರಿ ಬಳಿ ನಂಬರ್ ಪ್ಲೇಟ್ ಇಲ್ಲದ ಸ್ಥಿತಿಯಲ್ಲಿ ಪತ್ತೆ, ಪೊಲೀಸ್ ವಶಕ್ಕೆ

0

ಮಾಣಿ ಮೈಸೂರು ಹೆದ್ದಾರಿಯ ಬೊಳುಬೈಲುನಲ್ಲಿ ಮಹಿಳೆ ಚಲಾಯಿಸುತ್ತಿದ್ದ ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದು ಈ ಸಂಧರ್ಭ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದ ಟಿಪ್ಪರ್ ಲಾರಿ ಮಾರನೇ ದಿನ ಸಂಜೆ ನಂಬರ್ ಪ್ಲೇಟ್ ಇಲ್ಲದ ಸ್ಥಿತಿಯಲ್ಲಿ ಸುಳ್ಯ ಮೆಸ್ಕಾಂ ಕಚೇರಿ ಬಳಿ ಪತ್ತೆ ಯಾಗಿದ್ದು ಸುಳ್ಯ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಘಟನೆ ನ.14 ರಂದು ಗುರುವಾರ ತಡರಾತ್ರಿ ನಡೆದಿದ್ದು ಮಡಿಕೇರಿಯಿಂದ ಮಂಗಳೂರು ಕಡೆಗೆ ಮಹಿಳೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿಗೆ ಪುತ್ತೂರು ಕಡೆಯಿಂದ ಹಿಟಾಚಿ ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ವಾಹನ ಬೊಳುಬೈಲು ಬಳಿ ಡಿಕ್ಕಿ ಹೊಡೆದಿದೆ ಇಂದು ತಿಳಿದು ಬಂದಿದೆ .

ಈ ವೇಳೆ ಟಿಪ್ಪರ್ ಚಾಲಕ ತನ್ನ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದ.

ಡಿಕ್ಕಿ ಸಂಭವಿಸಿದ ಕಾರು ಮಡಿಕೇರಿ ಕಾವೇರಿ ಆಂಬುಲೆನ್ಸ್ ಮಾಲಕರಿಗೆ ಸೇರಿದ್ದು, ಹಿಟ್ ಅಂಡ್ ರನ್ ಮಾಡಿದ ವಾಹನವನ್ನು ಹುಡುಕಾಡಲು ಸುಳ್ಯದ ಆಂಬುಲೆನ್ಸ್ ವಾಹನ ಚಾಲಕ ಮಾಲಕ ಸಂಘದ ಸದಸ್ಯರುಗಳು ಮುಂದಾಗಿ ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದರು.

ಆದರೆ ನ 15 ರಂದು ಶುಕ್ರವಾರ ಸಂಜೆ ಸುಳ್ಯ ಮೆಸ್ಕಾಂ ಕಚೇರಿ ಬಳಿ ನಂಬರ್ ಪ್ಲೇಟ್ ಇಲ್ಲದ ಸ್ಥಿತಿಯಲ್ಲಿ ಲಾರಿ ಮಾತ್ರ ಪತ್ತೆಯಾಗಿದ್ದು , ಅದರಲ್ಲಿದ್ದ ಹಿಟಾಚಿ ಇರಲಿಲ್ಲ.

ಲಾರಿಯ ಎರಡು ಬದಿಗಳಲ್ಲಿಯೂ ಕೂಡ ಇರುವ ನಂಬರ್ ಪ್ಲೇಟ್ ಅನ್ನು ಅಳಿಸಿದ್ದು ಲಾರಿಯ ನಂಬರ್ ಕಾಣದ ರೀತಿಯಲ್ಲಿ ಕಂಡು ಬಂದಿದೆ.

ಅಲ್ಲೇ ಪಕ್ಕದಲ್ಲಿ ಮೆಸ್ಕಾಂ ಇಲಾಖೆಯ ಬಳಿ ಕಾಮಗಾರಿ ನಡೆಯುತ್ತಿದ್ದು ಹಿಟಾಚಿ ಇಲ್ಲಿ ಕೆಲಸ ಮಾಡುತ್ತಿರಬಹುದು ಎಂದು ಕೂಡ ಹೇಳಲಾಗುತ್ತಿದೆ.

ಘಟನೆಯಿಂದ ಕಾರಿನ ಡೋರು ಮತ್ತು ಮಿರರ್ ಭಾಗಕ್ಕೆ ಅಲ್ಪ ಮಟ್ಟಿಗೆ ಜಖಮ್ ಆಗಿದ್ದು ಕಾರಿನಲ್ಲಿ ಕಾರನ್ನು ಚಲಾಯಿಸುತ್ತಿದ್ದ ಮಹಿಳೆ ಮಾತ್ರ ಇದ್ದು ಯಾವುದೇ ಅಪಾಯ ಸಂಭವಿಸಿಲ್ಲ.

ಸುಳ್ಯ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ತನಿಖೆ ಬಳಿಕವೇ ಲಾರಿ ಯಾರದ್ದು? ಚಾಲಕ ಯಾರು? ಎಂಬಿತ್ಯಾದಿ ಮಾಹಿತಿ ತಿಳಿಯಬೇಕಾಗಿದೆ.