ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಮಕ್ಕಳದಿನಾಚರಣೆ ಹಾಗೂ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮ ಪಂಜ ಸ.ಮಾ.ಹಿ.ಪ್ರಾ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಲ.ಗಂಗಾಧರ್ ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಶಶಿಧರ್ ಪಳಂಗಾಯ ಅಧ್ಯಕ್ಷತೆ ವಹಿಸಿದ್ದರು. ಡಾ. ಗ್ರೀಷ್ಮ ಆರ್ನೋಜಿ ಮಕ್ಕಳ ಕ್ಯಾನ್ಸರ್ ಬಗ್ಗೆ ಜಾಗೃತಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ವೇದಿಕೆಯಲ್ಲಿ ಕಾರ್ಯದರ್ಶಿ ಲ. ಮೋಹನ್ ಕೂಟಾಜೆ
ಖಜಾಂಜಿ ಸುರೇಶ ನಡ್ಕ,
ಸೋಮಶೇಖರ ನೇರಳ ಉಪಸ್ಥಿತರಿದ್ದು ಶುಭ ಹಾರೈಸಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ಲೀಲಾಕುಮಾರಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಲ.ತುಕರಾಮ್ ಏನೆಕಲ್ ವೇದಿಕೆಗೆ ಆಹ್ವಾನಿಸಿದರು. ರಶ್ಮಿ ಪಳಂಗಾಯ ಲಯನ್ಸ್ ಪ್ರಾರ್ಥನೆ ನೆರವೇರಿಸಿದರು. ಸಂಯೋಜಕಿ ಲ.ತಾರ ಕೂಟಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಲ. ಕರುಣಾಕರ ಎಣ್ಣೆಮಜಲು ಧ್ವಜವಂದನೆ ನೆರವೇರಿಸಿದರು.
ಕಾರ್ಯಕ್ರಮದ ನಂತರ ‘ಪಟ್ಟಾಭಿರಾಮ ಸುಳ್ಯ’ ಇವರಿಂದ ಮೈಮ್ ,ಮಿಮಿಕ್ರಿ, ಶ್ಯಾಡೋ ಪ್ಲೇ
ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಭಾಗಿತ್ವದಲ್ಲಿ ಮಧುಮೇಹ, ರಕ್ತದೊತ್ತಡ ಪರೀಕ್ಷೆ ನಡೆಸಲಾಯಿತು. ಸುಮಾರು 100 ಕ್ಕೂ ಮಿಕ್ಕಿ ಹೆತ್ತವರ ತಪಾಸಣೆ ಪಡಿಸಿಕೊಂಡರು.