ಮಂಡೆಕೋಲಿನಲ್ಲಿ ಗಡಿನಾಡ ಉತ್ಸವ ಪ್ರಯುಕ್ತ ಕ್ರೀಡೋತ್ಸವ

0

ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಮಂಡೆಕೋಲು ಗ್ರಾಮ ಗೌಡ ಸಮಿತಿ ಆಶ್ರಯದಲ್ಲಿ ಅರೆಭಾಷೆ ಗಡಿನಾಡ ಉತ್ಸವ ಡಿ.1ರಂದು ಮಂಡೆಕೋಲಿನಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಕ್ರೀಡಾಕೂಟವು ಪೇರಾಲು ಶಾಲೆಯಲ್ಲಿ ನಡೆಯಿತು.

ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರದ ಅಧ್ಯಕ್ಷತೆಯನ್ನು ಮಂಡೆಕೋಲು ಗ್ರಾಮ ಗೌಡ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ವಹಿಸಿದ್ದರು.

ಮ್ಯಾರಥಾನ್ ಓಟಗಾರರಾದ ವಿನಯ್ ನಾರಾಲು ಉದ್ಘಾಟನೆ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ಕ್ರೀಡಾಪಟು ದೇವದಾಸ್ ಕುಕ್ಕುಡೇಲು, ಗ್ರಾಮ ಪಂಚಾಯತ್ ಸದಸ್ಯರುಗಳಾದ ನಾರಾಯಣ ಕೆದ್ಕಾರ್, ಶ್ರೀಮತಿ ತಿಲಕ‌ ಕುತ್ಯಾಡಿ, ತಾರನಾಥ ಕೊಡೆಂಜಿಕಾರ್, ನ್ಯಾಯವಾದಿ ಶ್ರೀಹರಿ ಕುಕ್ಕುಡೇಲು, ಎಸ್.ಡಿ.ಎಂ.ಸಿ. ಅಧ್ಯಕ್ಷ ಮೋಹನದಾಸ್ ಕುಕ್ಕುಡೇಲು, ಗ್ರಾಮ ಮಹಿಳಾ ಘಟಕ ಅಧ್ಯಕ್ಷೆ ದಿವ್ಯಲತಾ ಚೌಟಾಜೆ, ಕಾರ್ಯದರ್ಶಿ ಭಾರತಿ ಯು.ಎಂ., ಗ್ರಾಮ ಗೌಡ ಸಮಿತಿ‌ ಕಾರ್ಯದರ್ಶಿ ದಾಮೋದರ ಮಿತ್ತಪೇರಾಲು, ತರುಣ ಘಟಕ ಸಂಚಾಲಕರುಗಳಾದ ತೀರ್ಥೇಶ್ ಬಲಂದೋಟಿ, ಕುಸುಮಾಧರ ಮಾವಜಿ, ಗಡಿನಾಡ ಉತ್ಸವ ಸಂಚಾಲಕರಾದ ಡಾ.ಎನ್.ಎ. ಜ್ಞಾನೇಶ್, ಚಂದ್ರಶೇಖರ ಪೇರಾಲು, ಅಕಾಡೆಮಿ ಸದಸ್ಯರು‌ ಮೊದಲಾದವರಿದ್ದರು.

ದಾಮೋದರ ಮಿತ್ತಪೇರಾಲು ಸ್ವಾಗತಿಸಿ, ದಿವ್ಯಲತಾ ಚೌಟಾಜೆ ವಂದನಾರ್ಪಣೆ ಮಾಡಿದರು. ಜಯರಾಜ್ ಕುಕ್ಕೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು.