ಬೆಳ್ಳಾರೆ: ಗ್ರಂಥಾಲಯ ಸಪ್ತಾಹದ 2024 ಅಂಗವಾಗಿ ಓದುಗರೊಂದಿಗೆ ಸಂವಾದ ಕಾರ್ಯಕ್ರಮ

0

ಓದುಗರೇ ಗ್ರಂಥಾಲಯಗಳ ನಿಜವಾದ ಆಸ್ತಿ, ಸಾಹಿತ್ಯ ಕ್ಷೇತ್ರಕ್ಕೆ ಸುಳ್ಯ ತಾಲೂಕಿನ ಸಾಹಿತಿಗಳ ಕೊಡುಗೆ ಅಪಾರ, ಅನನ್ಯ ಶಿಕ್ಷಕ ಲಿಂಗಪ್ಪ ಬೆಳ್ಳಾರೆ

ಕರ್ನಾಟಕ ಸರ್ಕಾರ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ. ಕ. ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಬೆಳ್ಳಾರೆ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರ ಬೆಳ್ಳಾರೆ ಆಶ್ರಯದಲ್ಲಿ ಸಂಘ ಸಂಸ್ಥೆಗಳ ಮತ್ತು ಓದುಗರ ಸಹಕಾರದೊಂದಿಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2024ರ ಅಂಗವಾಗಿ ಓದುಗರೊಂದಿಗೆ ಸಂವಾದ ಹಾಗೂ ಸುಳ್ಯ ತಾಲೂಕಿನ ಸಾಹಿತಿಗಳ ಪರಿಚಯ ಮತ್ತು ಗ್ರಂಥಾಲಯ ಬಳಕೆ ಮತ್ತು ಅಭಿವೃದ್ಧಿಯಲ್ಲಿ ಸಾರ್ವಜನಿಕರ ಪಾತ್ರ ಎಂಬ ವಿಷಯದ ಬಗ್ಗೆ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ ನ.18 ರಂದು ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ನಡೆಯಿತು.

ಎಣ್ಮೂರು ಸರಕಾರಿ ಪ್ರೌಢಶಾಲೆಯ ಆಂಗ್ಲ ಬಾಷಾ ಶಿಕ್ಷಕರಾದ ಲಿಂಗಪ್ಪ ಬೆಳ್ಳಾರೆ ಉಪನ್ಯಾಸ ನೀಡಿದರು. ಗ್ರಂಥಾಲಯ ಸಲಹಾ ಸಮಿತಿ ಸದಸ್ಯರಾದ ಶಕೀಲಾ ವೈ ಶೆಟ್ಟಿ ಸ್ವಾಗತಿಸಿ, ಪೆರುವಾಜೆ ಗ್ರಂಥಾಲಯ ಗ್ರಂಥಪಾಲಕ ಪ್ರಶಾಂತ್ ಮೊಂತೆರೋ ವಂದಿಸಿದರು. ಬೆಳ್ಳಾರೆ ಗ್ರಂಥಾಲಯ ಗ್ರಂಥಪಾಲಕಿ ಶಶಿಕಲಾ ಕಾರ್ಯಕ್ರಮ ನಿರ್ವಹಿಸಿದರು.