ಮಳೆಗಾಲದ ಅಪರೂಪದ ಕೌತುಕದ ಅತಿಥಿ ಪೌಡರ್ ಬ್ರಷ್ ಅಣಬೆ…!(ಪುಟಿದೆದ್ದ ಚೆಲುವು)

0

ಪ್ರಕೃತಿ ಮಾತೆಯ ಮುಂದೆ ಎಲ್ಲರೂ ಶೂನ್ಯ ಮಳೆಗಾಲದ ಅತಿಥಿ ಯಾರಿಗೆಲ್ಲ ಇಷ್ಟ ಕಂಡ ತಕ್ಷಣ ಬಾಯಲ್ಲಿ ನೀರೂರಿಸುವ ರುಚಿಕರವಾದ ಮಳೆಗಾಲದಲ್ಲಿ ಮಾತ್ರ ಸಿಗುವ ಹುತ್ತದ ಅಣಬೆ ತಿಂದವನೇ ಬಲ್ಲ ಇವುಗಳ ರುಚಿ ಇದಕ್ಕೆ ಹೇಳುವುದು ನಮ್ಮ ಮಲೆನಾಡು ಸ್ವರ್ಗ ಅಂತ ಮಳೆಗಾಲದ ಸ್ನೇಹಿತ ತುಳುನಾಡಿನಲ್ಲಿ ಇದು ಚಿರ ಪರಿಚಿತ ಇದರ ಹೆಸರು ಹೇಳಿ ನೋಡೋಣ.
ಒಂದೇ ರಾತ್ರಿಯಲ್ಲಿ ಬೆಳೆದು ನಿಲ್ಲುವ ನಾಯಿ ಕೊಡೆಯಲ್ಲಿ ಹಲವಾರು ತರಾವಳಿಗಳಿದ್ದು ಇದು ನಮ್ಮ ಆಹಾರಕ್ಕೆ ಆಗದಿದ್ದರೂ ನೋಡಲು ಸುಂದರ.
ಇದು ಯಾರು ಬೆಳೆಸಿದ್ದು ಅಲ್ಲ ತನ್ನಿಂದ ತಾನೇ ಹುಟ್ಟುತ್ತವೆ. ಇದರಲ್ಲಿ ಎಲ್ಲವೂ ಆಹಾರವಾಗುವುದಿಲ್ಲ ಕೆಲವಷ್ಟೇ ಸೀಮಿತವಾಗಿದೆ ನೋಡಿ ತಿಳಿದು ಬಳಸಬೇಕು ಕೆಲವು ವಿಷಕಾರಿಯೂ ಆಗಿದೆ ಮಶ್ರೂಮ್ ಎಂದು ಅಣಬೆಯನ್ನು ಕರೆಯುತ್ತೇವೆ ಕಲ್ಲಣಬೆ, ನಾಯಿಮಿರಿ ,ಸುರುಳಿ,ನಾಯಿಕೊಡೆ ಹೇಗೆ ಹಲವಾರು ಅಲ್ಲದೆ ಮರ ಅಣಬೆಗಳು ನೆಲದಲ್ಲೂ ಅದ್ಭುತವಾದ ಮಹಿಳೆಯರಂತೆ ನಿಲುವಂಗಿ ಹಾಕಿದ ಅಣಬೆ, ಇವು ಕೀಟಗಳನ್ನು ಆಕರ್ಷಿಸುತ್ತವೆ ಇದರ ದೇಹ ಬಲೆ ಆಕಾರದಲ್ಲಿರುತ್ತದೆ.

ಈಗ ಇಲ್ಲಿ ಚಿತ್ರಿಸಿದ ಅಣಬೆ ಮಹಿಳೆಯ ಕಿಟ್ನಲ್ಲಿ ಇರುವ ಬ್ರಷ್ ನಂತೆ ಭಾಸವಾಗುತ್ತದೆ. ಇದು ಅತ್ಯಂತ ಸಾಫ್ಟ್ ಆಗಿದ್ದು ಪೌಡರ್ ಬ್ರಷ್ ಒಂದು ಕರಡಿಗೆಯಂತೆ ಇದ್ದು ಸ್ಪಾಂಜ್ ಟೈಪ್ ನಲ್ಲಿ ಇದೆ ಚಿಕ್ಕ ಮಕ್ಕಳ ಸಾಕ್ಸ್ನಂತೆ ಹೋಟೆಗಳಲ್ಲಿ ಉಪ್ಪು ಮಸಾಲ,ಸಕ್ಕರೆ ಎಂದು ಟೇಬಲ್ ನಲ್ಲಿ ಇಡುವ ಬಿರಡೆಯಂತೆಯು ಕಾಣುತ್ತದೆ.

ತೆಂಗಿನಕಾಯಿಯಲ್ಲಿ ಮೊಳಕೆ ಬಂದಾಗ ತೆಂಗಿನ ಒಳಗಿನ ಹೂವಿನಂತೆಯೂ ಕಾಣುತ್ತದೆ ಬಲ್ಬ್ ಗಳಂತೆ ಇದ್ದು ಹೀಗೂ ಉಂಟೆ…!
ವಾವ್ ಅಮೇಜಿಂಗ್ ಫೆಂಟಾಸ್ಟಿಕ್……ಪುಟಿದೆದ್ದ ಚೆಲುವು.
ನ್ಯಾಚುರಲ್ ಆಗಿ ಸಿಗುವ ಹಣಬೆ ಸಾರಿನ ರುಚಿ ಮುಂದೆ ಆರ್ಟಿಫಿಶಿಯಲ್ ಆಗಿ ಬೆಳೆಯುವ ಅಣಬೆಯ ರುಚಿ ಬೇರೆ ಏನೇನು ಅಲ್ಲಾ….
ನೀರಿಗಿಂತ ಹಾಲು ಚಂದ ಹಾಲಿಗಿಂತ ಜೇನು ಚೆಂದ ಜೇನಿಗಿಂತ ಪರಮಾತ್ಮನ ಮಹಾ ವಾಕ್ಯಗಳೇ ಚಂದ…

ಚಿತ್ರ ಬರಹ: ಕುಮಾರ್ ಪೆರ್ನಾಜೆ ಪುತ್ತೂರು