ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವಾಹನ ಪಾರ್ಕಿಂಗ್ ನ ಬಗೆಗಿನ ಪರ-ವಿರೋಧ ಆರೋಪಗಳಿಗೆ ಮಾತುಕತೆ ಮೂಲಕ ಇತ್ಯರ್ಥ

0

ವೈದ್ಯಾಧಿಕಾರಿ ಡಾ. ಕರುಣಾಕರರವರಿಂದ ಪತ್ರಿಕಾ ಪ್ರಕಟಣೆ

ಸುಳ್ಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ವಾಹನ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿ ಆಂಬುಲೆನ್ಸ್ ಚಾಲಕರ ಮತ್ತು ಆಸ್ಪತ್ರೆಯ ವೈದ್ಯರ ನಡುವೆ ನಡೆಯುತ್ತಿದ್ದ ಪರ ವಿರೋಧ ಆರೋಪಗಳನ್ನು ನವಂಬರ್ 21ರಂದು ವೈದ್ಯಾಧಿಕಾರಿ ಡಾ. ಕರುಣಾಕರ ರವರ ನೇತೃತ್ವದಲ್ಲಿ ಮಾತುಕತೆ ನಡೆದು ವಿಷಯವನ್ನು ಇತ್ಯರ್ಥಪಡಿಸಿರುವುದಾಗಿ ವೈದ್ಯರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಅವರು ನೀಡಿರುವ ಪ್ರಕಟಣೆಯಲ್ಲಿ ‘ ದಿನಾಂಕ 19/11/2024 ರಂದು ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಯವರಾದ ಸಿದ್ದೀಖ್ ಗೂನಡ್ಕ ರವರು ಆಸ್ಪತ್ರೆ ಆವರಣದ ಸ್ವಚ್ಛತೆ ಶ್ರಮದಾನದ ಬಗ್ಗೆ ಚರ್ಚಿಸಲು ತಾಲೂಕು ಆಸ್ಪತ್ರೆ ಸುಳ್ಯ ಕ್ಕೆ ಬಂದಿರುತ್ತಾರೆ. ಸಂಜೆ ಸಿಬ್ಬಂದಿಗಳಿಗೆ ಮೀಸಲಾದ ಪಾರ್ಕಿಂಗ್ ನಲ್ಲಿ ಇತರ ವಾಹನಗಳು ಇರದ ಕಾರಣ ಆಂಬುಲೆನ್ಸ್ ಪಾರ್ಕಿಂಗ್ ಮಾಡಿರುತ್ತಾರೆ. ಆಂಬುಲೆನ್ಸ್ ಪಾರ್ಕಿಂಗ್ ಮಾಡಿದ್ದರಿಂದ ಯಾವುದೇ ಸಿಬ್ಬಂದಿಗಳಿಗೆ ಅನಾನುಕೂಲವಾಗಿರುವುದಿಲ್ಲ. ಹಾಗೂ 10 ನಿಮಿಷಗಳಲ್ಲಿ ವಾಹನ ತೆರವುಗೊಳಿಸಿರುತ್ತಾರೆ.

ಹಾಗೂ 20/11/2024 ರಂದು ಪೂರ್ವಾಹ್ನ ಸುಳ್ಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶಹೀದ್ ಪಾರೆ ಯವರ ಉಪಸ್ಥಿತಿಯಲ್ಲಿ SჄS ISABA Sullia Zone ತಂಡದವರಿಂದ ತಾಲೂಕು ಆಸ್ಪತ್ರೆ ಆವರಣದ ಸ್ವಚ್ಛತೆಗೆ ಶ್ರಮದಾನ ನಡೆಸಲಾಯಿತು.

ದಿನಾಂಕ 20/11/2024 ರಂದು ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ-ಮಾಲಕರ ಸಂಘ ಸುಳ್ಯ ಇದರ ಪದಾಧಿಕಾರಿಗಳು ತಾಲೂಕು ಆಸ್ಪತ್ರೆ ಸುಳ್ಯ ಇದರ ಆಡಳಿತ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಿ ತಾಲೂಕು ಆಸ್ಪತ್ರೆ ಪಾರ್ಕಿಂಗ್ ಸಮಸ್ಯೆ ಎಂಬ ಮಾಧ್ಯಮ ವರದಿ ಬಗ್ಗೆ ಇರುವ ಸಮಸ್ಯೆ ಯನ್ನು ಬಗೆ ಹರಿಸಲಾಗಿದೆ. ಎಂದು ಅವರು ನೀಡಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.