ಬಳ್ಪ ಗ್ರಾಮದ ಎಣ್ಣೆಮಜಲು, ಗುಂಡಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಪರಿವಾರ ದೈವಗಳ ನೇಮೋತ್ಸವ ಡಿ. 31 ಮತ್ತು ಜ. 01ರಂದು ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ ರವರ ನೇತೃತ್ವದಲ್ಲಿ ಧರ್ಮಸ್ಥಳದ ಧರ್ಮದರ್ಶಿ ಡಾ. ವೀರೇಂದ್ರ ಹೆಗ್ಗಡೆಯವರ ಪೂರ್ಣಾಶೀರ್ವಾದದೊಂದಿಗೆ ವಾಸ್ತು ತಜ್ಞ ಪ್ರಸಾದ್ ಮುನಿಯಂಗಳರವರ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ನ. 22ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು. ಉದ್ಯಮಿ ಮುರಲಿ ಕಾಮತ್ ಬಳ್ಪ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮುರಲಿ ಕಾಮತ್ ರನ್ನು ಗೌರವಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಗೌಡ ಎಣ್ಣೆಮಜಲು, ಅಧ್ಯಕ್ಷ ನಿತ್ಯಾನಂದ ಎಣ್ಣೆಮಜಲು, ಕಾರ್ಯದರ್ಶಿ ಲೋಕೇಶ್ ಎಣ್ಣೆಮಜಲು, ಜತೆ ಕಾರ್ಯದರ್ಶಿ ಶಿವಕುಮಾರ್ ಎಣ್ಣೆಮಜಲು, ಕೋಶಾಧಿಕಾರಿ ಸುರೇಂದ್ರ ಎಣ್ಣೆಮಜಲು, ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಗಣಪಯ್ಯ ಗೌಡ ಎಣ್ಣೆಮಜಲು, ಅಧ್ಯಕ್ಷ ರಮಾನಂದ ಎಣ್ಣೆಮಜಲು, ಉಪಾಧ್ಯಕ್ಷರುಗಳಾದ ಭಾಸ್ಕರ ಗೌಡ ಪಂಡಿ, ಪುಟ್ಟಣ್ಣ ಗೌಡ ಕಲ್ಲೇರಿ, ಸೀತಾರಾಮ ಗೌಡ ದೊಡ್ಡಮನೆ, ಕೋಶಾಧಿಕಾರಿ ಚಂದ್ರನಾಥ ಪಟುಳಿ, ಜತೆ ಕಾರ್ಯದರ್ಶಿ ಪ್ರಕಾಶ್ ಮುಡ್ನೂರು, ಸದಸ್ಯರಾದ ಹರಿಯಪ್ಪ ಗೌಡ ಪಟುಳಿ, ತಿಮ್ಮಪ್ಪ ಗೌಡ ಕಲ್ಲೇರಿ, ದೀಪಕ್ ದೊಡ್ಡಮನೆ, ಊರಿನ ಪ್ರಮುಖರಾದ ಚಂದ್ರಶೇಖರ ಪಂಡಿ, ಶೂರಪ್ಪ ಗೌಡ ಪಂಡಿ, ವಿಠಲ್ ದಾಸ್ ಕಲ್ಲೇರಿ, ಚಿದಾನಂದ ಕಲ್ಲೇರಿ, ಚಂದ್ರಶೇಖರ ಕಲ್ಲಾಜೆ, ಸೀತಾರಾಮ ಗೌಡ ಎ.ಬಿ, ಪುಟ್ಟಣ್ಣ ಮಾಸ್ತರ್, ಮಾಧವ ದಂಬೆಕೋಡಿ, ಲೋಹಿತ್ ಎಣ್ಣೆಮಜಲು ಸೇರಿದಂತೆ ಎಣ್ಣೆಮಜಲು ಕುಟುಂಬಸ್ಥರು, ಗ್ರಾಮಸ್ಥರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಚೆನ್ನಕೇಶವ ಭಟ್ ಮುಡ್ನೂರು ದೇವತಾ ಪ್ರಾರ್ಥನೆ ನೆರವೇರಿಸಿದರು. ರಮಾನಂದ ಎಣ್ಣೆಮಜಲು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಾಸ್ಕರ ಗೌಡ ಪಂಡಿ ಶುಭ ಹಾರೈಸಿದರು. ಲೋಕೇಶ್ ಎಣ್ಣೆಮಜಲು ವಂದಿಸಿದರು.