ಕಣ್ಮನ ಸೆಳೆದ
ಭಜಕರ ಆಕರ್ಷಕ ಮೆರವಣಿಗೆ
ಹಿಂದೂ ಸಮಾಜದ ಏಕತೆಗೆ ಭಜನೆಯೊಂದೆ ಅಸ್ತ್ರ.ದೇಹದ ಸಹಸ್ರ ನಾಡಿಗಳು ನಿರಂತರವಾಗಿ ಪ್ರಕರವಾಗಿರಬೇಕಾದರೆ ಭಜನೆಯೇ ಸಾಧನ. ಟೀಕೆ ಗಳಿಗೆ ಉತ್ತರ ಕೊಡುತ್ತಾ ಹೋದರೆ ನಮ್ಮ ಕೆಲಸ ಬಾಕಿಯಾಗುವುದು.
ಭಜನೋತ್ಸವದಂತಹ ಕಾರ್ಯಕ್ರಮಗಳು ಧರ್ಮದ ಒಳಗಿನ ಜಾಗೃತಿ ಮಾಡುವ ಉದ್ದೇಶ ಹೊಂದಿದೆ ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಯವರು ಮಾತನಾಡಿದರು.
ಅವರು ಅರಂತೋಡಿನ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ನ.17 ರಂದು ನಡೆದ ಭಜನೋತ್ಸವ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು.
ಸಾಂಸಾರಿಕವಾಗಿ ಐಕ್ಯತೆಯಾಗಬೇಕಾದರೆ ಮನೆ ಮನೆಗಳಲ್ಲಿ ಭಜನೆಯಾಗಬೇಕು. ಸಮಾಜವನ್ನು ಶುದ್ದೀಕರಿಸಲು ಅಸ್ತ್ರ ವಾಗಿ ಭಜನೆ ಪೂರಕವಾಗಿದೆ. ಟೀಕೆ ಟಿಪ್ಪಣಿ ಗಳಿಗೆ ಕಿವಿ ಕೊಡದೆ ತನ್ನ ಕಾರ್ಯವನ್ನು ಮಾಡಿಕೊಂಡು ಹೋದ ಸಾಮಾನ್ಯ ವ್ಯಕ್ತಿ ಇಂದು ದೇಶದ ಪ್ರಧಾನಿಯಾಗಿದ್ದಾರೆ. ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರಂತರವಾಗಿ ಮಾಡುತ್ತಾ ಹೋದರೆ ಗೆಲುವು ಖಂಡಿತ. ಭಜನೆಯಿಂದ ಸತ್ಯ ನಾರಾಯಣ ದೇವರ ಪೂಜಾ ಕಥಾ ಫಲವಾಗಿ ಪ್ರಾಪ್ತಿಯಾಗುವುದು. ಸಮಾಜದ ಅಂಕು ಡೊಂಕನ್ನು ತಿದ್ದಿ ಸರಿಪಡಿಸುವ ಸಲುವಾಗಿ ದಾಸರು ಕೀರ್ತನೆಯ ರೂಪದಲ್ಲಿ ಭಜನೆಯನ್ನು ಬಳುವಳಿಯಾಗಿ ನೀಡಿದ್ದಾರೆ ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ತಾಲೂಕು
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು, ಭಜನೋತ್ಸವ ಸಮಿತಿ ಸಂಪಾಜೆ ವಲಯ
ಮತ್ತು ಸ್ಥಳೀಯ ಸಂಘ ಸಂಸ್ಥೆಗಳಸಹಯೋಗದಲ್ಲಿ ಡಾ॥ ಡಿ. ವೀರೇಂದ್ರ ಹೆಗ್ಗಡೆ ಮತ್ತು ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ತಾಲೂಕು ಮಟ್ಟದ
ಭಜನೋತ್ಸವವು ನಡೆಯಿತು.
ಬೆಳಗ್ಗೆ ಭಜಕರ ಮೆರವಣಿಗೆಯು
ಶ್ರೀ ದುರ್ಗಾಮಾತಾ ಭಜನಾ ಮಂದಿರ ಅರಂತೋಡಿನಿಂದ ನೆಹರು ಸ್ಮಾರಕ ಪದವಿ ಪೂರ್ವಕಾಲೇಜು ಸಭಾಂಗಣದ ತನಕ ಸಾಗಿ ಬಂತು. ಹಿರಿಯರಾದ ಕೆ.ಆರ್. ಪದ್ಮನಾಭ ಕುರುಂಜಿಯವರು ಮೆರವಣಿಗೆಗೆ ಚಾಲನೆ ನೀಡಿದರು.
ಭಜನೋತ್ಸವ ಸಮಿತಿಯ ಅಧ್ಯಕ್ಷ ಹರೀಶ್
ಕಂಜಿಪಿಲಿ ಯವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ
ಕು। ಭಾಗೀರಥಿ ಮುರುಳ್ಯ,ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,
ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ,
ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು ತೊಡಿಕಾನ ವ್ಯ. ಸೇ. ಸ.ಬ್ಯಾಂಕ್ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ನಿಕಟ ಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಯು.ಎಂ,
ಮಂಜುನಾಥೇಶ್ವರ ಭಜನಾ ಪರಿಷತ್ ನಿರ್ದೇಶಕ ಸೋಮಶೇಖರ ಪೈಕ,
ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ರತ್ನಾವತಿ ಅಳಿಕೆ ,
ರಾಮಚಂದ್ರ ಕಲ್ಲಗದ್ದೆ, ಯೋಜನಾಧಿಕಾರಿ ಮಾಧವ ಗೌಡ ರವರು
ಉಪಸ್ಥಿತರಿದ್ದರು.
ಕು. ದೀಪ್ತಿ ಪ್ರಾರ್ಥಿಸಿದರು.
ಸುಳ್ಯ ಯೋಜನಾಧಿಕಾರಿ ಮಾಧವ ಗೌಡ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಭಜನಾ ಪರಿಷತ್ ಅಧ್ಯಕ್ಷ ಯತೀಶ್ ರೈ ದುಗಲಡ್ಕ
ವಂದಿಸಿದರು.
ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.