ಬೆಳ್ಳಾರೆ ಸಹಕಾರಿ ಸಂಘದ ಚುನಾವಣೆ : ಬಿಜೆಪಿ ಗೆಲುವು

0

ಬೆಳ್ಳಾರೆ ಮುಖ್ಯ ಪೇಟೆಯಲ್ಲಿ ವಿಜಯೋತ್ಸವ

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು ಬೆಳ್ಳಾರೆ ಯಲ್ಲಿ ವಿಜಯೋತ್ಸವ ನಡೆಯಿತು.


ಮತ ಎಣಿಕೆ ನಡೆದ ಬಳಿಕ ಗೆದ್ದ ಅಭ್ಯರ್ಥಿಗಳ ಘೋಷಣೆ ನಡೆಯಿತು.
ಬಳಿಕ ಬಿಜೆಪಿ ಅಭ್ಯರ್ಥಿಗಳು ಕೆಪಿಎಸ್ ನ ಗೇಟ್ ಎದುರು ಪಕ್ಷದ ಮುಖಂಡರು,ಕಾರ್ಯಕರ್ತರು ವಿಜಯೋತ್ಸವ ನಡೆಸಿ ವಿಜಯ ಅಭ್ಯರ್ಥಿಗಳನ್ನು ಅಭಿನಂದಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ,ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ,ಯತೀಶ್ ಆರ್ವಾರ ಸಹಿತ ಹಲವು ಜನ ಬಿಜೆಪಿ ಮುಖಂಡರು ಅಭಿನಂದಿಸಿ ಮಾತನಾಡಿದರು.
ಬಳಿಕ ಬೆಳ್ಳಾರೆ ಮುಖ್ಯ ರಸ್ತೆಯಲ್ಲಿ ವಿಜಯೋತ್ಸವ ನಡೆಯಿತು.
ಪಟಾಕಿ ಸಿಡಿಸಿ ಸಂಭ್ರಮಿಸಿದರು.