ಪಂಜ:ಚಾಲಕ ಮನೋಜ್ ಕುಮಾರ್ ನಿಧನ

0

ಪಂಜ ಆಟೋ ರಿಕ್ಷಾ ಚಾಲಕರ ಸಂಘದ ಸದಸ್ಯ , ಬಳ್ಪ ಗ್ರಾಮದ ಕಾಂಜಿ ವಾಸುದೇವ ಗೌಡ ಮತ್ತು ಶ್ರೀಮತಿ ದೇವಕಿ ದಂಪತಿಗಳ ಪುತ್ರ ಮನೋಜ್ ಕುಮಾರ್ ರವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಆಸ್ಪತ್ರೆಯಲ್ಲಿ ಡಿ.25 ರಾತ್ರಿ ನಿಧನರಾದರು.

ಅವರಿಗೆ 32 ವರುಷ ವಯಸ್ಸಾಗಿತ್ತು. ಪಂಜದಲ್ಲಿ ಅನೇಕ ವರ್ಷಗಳಿಂದ ಆಟೋ ರಿಕ್ಷಾ ಬಾಡಿಗೆ ನಡೆಸುತ್ತಿದ್ದ ಅವರು ಕೆಲವು ವರ್ಷಗಳಿಂದ ಪಂಜದಲ್ಲಿ ಗೂಡ್ಸ್ ರಿಕ್ಷಾ ಬಾಡಿಗೆ ನಡೆಸುತ್ತಿದ್ದರು. ಮೃತರು ಅವಿವಾಹಿತರಾಗಿದ್ದು, ತಂದೆ, ತಾಯಿ, ಸಹೋದರಿ, ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.