ಇದರ ಕೊನೆಗಾಣಿಸುವಿಕೆಗೆ ಸಮನ್ವಯ ಸಹಕಾರಿ ಬಳಗ ಅಸ್ತಿತ್ವಕ್ಕೆ ಮತ್ತು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ
ಸಮನ್ವಯ ಸಹಕಾರಿ ಬಳಗದ ಮುಖಂಡರಿಂದ ಪತ್ರಿಕಾಗೋಷ್ಠಿ
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಇದರ ಆಡಳಿತ ಮಂಡಳಿಯು ಕಳೆದ ಹಲವಾರು ವರ್ಷಗಳಿಂದ ಏಕ ವ್ಯಕ್ತಿ ನೆಲೆಯಲ್ಲಿ ಆಡಳಿತ ನಡೆಸಿಕೊಂಡು ಬರುತ್ತಿದೆ.
ಅಲ್ಲದೆ ಸಂಘದಲ್ಲಿರುವ ಎಲ್ಲಾ ವರ್ಗದ ಸದಸ್ಯರುಗಳಿಗೆ ಚುನಾವಣೆಯಲ್ಲಿ ಅವಕಾಶ ಕೊಡದೆ ಮೋಸ ಮಾಡುತ್ತಿದೆ.
ಇವರ ಈ ಪದ್ಧತಿಗೆ ಕೊನೆ ಗಾಣಿಸಬೇಕೆಂದು ಸಮಾನ ಮನಸ್ಕರಾದ ನಾವೆಲ್ಲರೂ ಒಂದಾಗಿ ಸಮನ್ವಯ ಸಹಕಾರಿ ಬಳಗವನ್ನು ಅಸ್ತಿತ್ವಕ್ಕೆ ತಂದಿದ್ದೇವೆ ಮತ್ತು ಈ ಬಾರಿಯ ಸಂಘದ ಚುನಾವಣೆಯಲ್ಲಿ ನಮ್ಮ ಸದಸ್ಯರುಗಳನ್ನು ಸ್ಪರ್ಧೆಗೆ ನಿಲ್ಲಿಸಿ ಗೆಲುವು ಸಾಧಿಸುತ್ತೇವೆ ಎಂದು ಸಮನ್ವಯ ವೇದಿಕೆಯ ಮುಖಂಡರುಗಳು ನ. 23 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಈ ವೇಳೆ ಮಾತನಾಡಿರುವ ಸಂಘದ ಸದಸ್ಯ ಮನೀಷ್ ‘ಕಳೆದ 15 ದಕ್ಕೂ ಹೆಚ್ಚು ವರ್ಷಗಳಿಂದ ಈ ಸಂಘದ ನಿರ್ದೇಶಕರಾಗಿರುವವರು ಮುಕ್ತ ಮನಸ್ಸಿನಿಂದ ಯುವಜನತೆಗೆ, ಮಹಿಳೆಯರಿಗೆ,ಮೂಲ ನಿವಾಸಿ ದಲಿತ ಸಮುದಾಯದವರಿಗೆ,ನೈಜ ಕಾರ್ಮಿಕರಿಗೆ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುತ್ತಿಲ್ಲ.
ಸಂಘದಲ್ಲಿ 3 ಸಾವಿರಕ್ಕೂ ಹೆಚ್ಚು ಸದಸ್ಯರುಗಳು ಇದ್ದು ಚುನಾವಣೆಯ ಸಂಧರ್ಭ ಮತದಾನ ಪಟ್ಟಿಯಲ್ಲಿ ಕೇವಲ 672 ಮಂದಿ ಮಾತ್ರ ಹೆಸರುಗಳು ಇರುವುದು ನೋಡಿದರೆ ಇಲ್ಲಿ ಏಕ ವ್ಯಕ್ತಿ ಆಧಾರಿತವಾಗಿ ಕೆಲಸ ಕಾರ್ಯ ಮಾಡುತ್ತಿರುವುದಕ್ಕೆ ಸಾಕ್ಷಿ ಎಂಬಂತಿದೆ ಎಂದರು.
ಮಹಿಳಾ ಸಶಕ್ತಿಕರಣ ಸಿದ್ಧಾಂತವನ್ನು ಇಲ್ಲಿ
ಅತ್ಯಂತ ವ್ಯವಸ್ಥಿತವಾಗಿ ಹಣಿಯಲಾಗಿದೆ.
ಆಡಳಿತ ಮಂಡಳಿ ಚುನಾವಣೆಗೆ ಸಂಘದ ಬೈಲಾ ಹಾಗೂ ಸಹಕಾರಿ ಸಂಘಗಳ ಕಾಯ್ದೆಯನುಸಾರ ಮತದಾನ ಹಕ್ಕುಳ್ಳ ಅರ್ಹ ಸದಸ್ಯರ ಕರಡು ಪಟ್ಟಿ ಮಾಡದೆ ಸಂಘದ ಸದಸ್ಯರ ಜನಸಂಖ್ಯೆಯ ಶೇಕಡಾ 20 ಕ್ಕಿಂತಲೂ ಕಡಿಮೆ ಇರುವಂತೆ ಮತದಾರರ ಪಟ್ಟಿ ರಚಿಸಿ ತಮಗೆ ಬೇಕಾದಂತೆ ಮಾಡಿಕೊಳ್ಳುತ್ತಿದ್ದಾರೆ.
ಸೊಸೈಟಿ ಯು ಪಟ್ಟಭದ್ರ ಹಿತಾಸಕ್ತಿಯುಳ್ಳ ಕೆಲವೇ ಕೆಲವು ವ್ಯಕ್ತಿಗಳ ಕಪಿಮುಷ್ಠಿಯಲ್ಲಿ ನರಳುತ್ತಿದ್ದು
ಈ ಹಿನ್ನಲೆಯಲ್ಲಿ ನಾವೆಲ್ಲಾರು ಸೇರಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ದೂರದೃಷ್ಟಿ ಚಿಂತನೆ,ಗಾಂಧಿ ತತ್ವ,ಸಂವಿಧಾನ, ಪ್ರಜಾಪ್ರಭುತ್ವವನ್ನು ಸಹಕಾರಿ ರಂಗದಲ್ಲಿ ಉಳಿಸುವ ದ್ವೇಯನಿಷ್ಠೆಯೊಂದಿಗೆ ಈ ಬರುವ ಡಿ.23 ರಂದು ನಡೆಯುವ ಸೊಸೈಟಿ ಚುನಾವಣೆಯಲ್ಲಿ ಸಮನ್ವಯ ಸಹಕಾರಿ ಬಳಗ ವು ಸ್ಪರ್ಧಿಸುವ ತೀರ್ಮಾನಕ್ಕೆ ಬಂದಿದ್ದೇವೆ.
ಅಲ್ಲದೆ ಸ್ವ ಹಿತಾಸಕ್ತಿಯುಳ್ಳ ವಯೋವೃದ್ಧರು, ಯುವಜನತೆ, ಮಹಿಳೆಯರು,ದಲಿತರು ಎಲ್ಲರಿಗೂ ಅವಕಾಶ ಸಿಗುವ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯರುಗಳಾದ ಧನಪಾಲ ಕೆ ಅರ್, ವರಧರಾಜ್ ಸಂಕೇಶ್, ಗಣೇಶ್ ಎಸ್ ಪಿ,ಯೋಗಿಶ್ ದಂಡಕಜೆ,ಚಂದ್ರಶೇಕರ ಪಿ ಎಸ್ ,ಸನತ್ ಪೆರಂಗೋಡಿ, ಕುಶಲಪ್ಪ ಪೇರಡ್ಕ, ಶಿವಪ್ರಸಾದ್ ಗೂನಡ್ಕ, ದೀಪಕ್ ಪೇರಡ್ಕ, ಬಾಲಚಂದ್ರ ಪೆಲ್ತಡ್ಕ, ಸುಧಾಕರ ಪೆಲ್ತಡ್ಕ, ಲೋಹಿತ್ ದೊಡ್ಡಡ್ಕ
ಮನೋಜ್ ಗೂನಡ್ಕ ,ಬೈಲೆ
ಹೊನ್ನಪ್ಪ ಕೆ.ಕೆ,ಸುರೇಶ್ ಕಡೆಪಾಲ ,ರೇಶ್ಮ ಪಿ.ಕೆ,ಶ್ವೇತ ವರಧರಾಜ್ ,ಕವಿತ ಪೆರಂಗೋಡಿ,ಶುಭಲತ ಪೆರಂಗೋಡಿ ,ಅನನ್ಯ ಮನೋಜ್ ,ಶ್ರೀ ನಿಧಿ ಕದಿಕಡ್ಕ ,ಜಗದೀಶ್ ದೊಡ್ಡಡ್ಕ ಗುರುಪ್ರಸಾದ್ ದಾಸ್ ಬೈಲೆ,ಅನಿಲ್ ಗೂನಡ್ಕ ಉಪಸ್ಥಿತರಿದ್ದರು.