ಜೇಸಿಐ ವಲಯ 15ರ ರಕ್ತದಾನ ವಿಭಾಗದ ವಲಯ ಸಂಯೋಜಕರಾಗಿ ಪ್ರದೀಪ್ ಕುಮಾರ್ ರೈ ಬೀಡು ಆಯ್ಕೆ

0


ಬೆಳ್ಳಾರೆ ಜೇಸಿಐ ಘಟಕದ 2025ನೇ ಸಾಲಿನ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಬೀಡು ಜೇಸಿಐ ಭಾರತದ ವಲಯ 15ರ 2026ನೇ ಸಾಲಿನ ನೀಡ್ ಬ್ಲಡ್ ಕಾಲ್ ಜೇಸಿ ರಕ್ತದಾನ ವಿಭಾಗದ ವಲಯ ಸಂಯೋಜಕರಾಗಿ ವಿಟ್ಲದಲ್ಲಿ ನಡೆದ ವಲಯಾಡಳಿತ ಮಂಡಳಿಯ ಪದಪ್ರದಾನ ಸಮಾರಂಭದಲ್ಲಿ ಆಯ್ಕೆಯಾಗಿದ್ದಾರೆ. ಪ್ರತಿಷ್ಠಿತ ಜೇಸಿಐ ಬೆಳ್ಳಾರೆ ಘಟಕದ 2025ನೇ ಸಾಲಿನ ಅಧ್ಯಕ್ಷರಾಗಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿ ಘಟಕಕ್ಕೆ ಸಮುದಾಯ ಅಭಿವೃದ್ಧಿ ವಿಭಾಗದಲ್ಲಿ ವಲಯ ಮಟ್ಟದ ರನ್ನರ್ ಪ್ರಶಸ್ತಿ ದೊರೆತಿದೆ. ರಕ್ತದಾನಿಯಾಗಿರುವ ಇವರು 15 ಬಾರಿ ರಕ್ತದಾನ ಮಾಡಿದ್ದಾರೆ.