ನಿರಂಜನ ಶತಮಾನೋತ್ಸವ ಸ್ಮರಣೆ – ವಿಚಾರಗೋಷ್ಠಿ
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸುಳ್ಯ ತಾಲೂಕು ಘಟಕದ ವತಿಯಿಂದ ಅರಂತೋಡಿನಲ್ಲಿ ನಡೆಯುತ್ತಿರುವ 27ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರಂಜನ ಶತಮಾನೋತ್ಸವ ಸ್ಮರಣೆ ವಿಚಾರಗೋಷ್ಠಿಯು ಡಾ. ಕುರುಂಜಿ ವೆಂಕಟರಮಣ ಗೌಡ ವೇದಿಕೆಯ ನಿರಂಜನ ಸಭಾಂಗಣದಲ್ಲಿ ನ.23ರಂದು ನಡೆಯಿತು.
ಸಾಹಿತಿ ನಂದಾ ಕುಮಾರಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯುತ್ತ ಕಾಲೇಜಿನ ಸಹ ಪ್ರಾಧ್ಯಾಪಕ ರಾಜಶೇಖರ ಹಳೆಮನೆ ಅವರು ನಿರಂಜನರ ಬದುಕು ಬರಹ ಅವಲೋಕನ ವಿಷಯದ ಕುರಿತಂತೆ ವಿಚಾರಗೋಷ್ಠಿ ಮಂಡಿಸಿದರು.
ಅರಂತೋಡು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್. ಅವರು ಸ್ವಾಗತಿಸಿ, ಯು.ಎಸ್. ಮನೋಹ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಅವರು ಕಾರ್ಯಕ್ರಮ ನಿರೂಪಿಸಿದರು.
ವಿಚಾರಗೋಷ್ಠಿಗೂ ಮೊದಲು ಅರಂತೋಡಿನ ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.