ಕುಕ್ಕೆ ಶ್ರೀ ದೇವಳದಲ್ಲಿ ಜಾತ್ರಾ ಸಮಯ ಸೇವೆಗಳಲ್ಲಿ ವ್ಯತ್ಯಯ

0

ಸೇವೆಗಳ ಲಭ್ಯತೆಯ ಬಗ್ಗೆ ಮಾಹಿತಿ ಇಲ್ಲಿದೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನ.27ರಿಂದ ಡಿ.12ರ ತನಕ ನೆರವೇರಲಿದೆ. ಜಾತ್ರೋತ್ಸವದ ನಿಮಿತ್ತ ಕ್ಷೇತ್ರದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪ ಸಂಸ್ಕಾರವು ನ.25 ರಿಂದ ಡಿ.12ರ ತನಕ ನೆರವೇರುವುದಿಲ್ಲ. ಡಿ.13ರಿಂದ ಸರ್ಪಸಂಸ್ಕಾರ ಸೇವೆ ಆರಂಭವಾಗಲಿದೆ.ಆದರೆ ಇತರ ಸೇವೆಗಳು ಎಂದಿನಂತೆ ನೆರವೇರುತ್ತದೆ. ಲಕ್ಷದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಕೆಲವೊಂದು ಸೇವೆಗಳು ನೆರವೇರುವುದಿಲ್ಲ ಭಕ್ತಾಧಿಗಳು ಸಹಕರಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.


ಲಕ್ಷದೀಪೋತ್ಸವ(ನ.30), ಚೌತಿ(ಡಿ.5), ಪಂಚಮಿ(ಡಿ.6) ದಿನದಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಚಂಪಾಷಷ್ಠಿ(ಡಿ.7) ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಚಂಪಾಷಷ್ಠಿ ದಿನ ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನೆರವೇರುವುದಿಲ್ಲ. ಲಕ್ಷದೀಪೋತ್ಸವ(ನ.30), ಚೌತಿ(ಡಿ.5), ಪಂಚಮಿ(ಡಿ.6)ಚಂಪಾಷಷ್ಠಿ(ಡಿ.7) ಮತ್ತು ಕೊಪ್ಪರಿಗೆ ಇಳಿಯುವ ಮಹಾಸಂಪ್ರೋಕ್ಷಣೆಯ ದಿನ (ಡಿ.12)ದಂದು ಪಂಚಾಮೃತ ಮಹಾಭಿಷೇಕ ಸೇವೆ ನಡೆಯುವುದಿಲ್ಲ.ನ.27ರಿಂದ ಡಿ.12ರ ತನಕ ಸಾಯಂಕಾಲದ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ.


ಚಂಪಾಷಷ್ಠಿ ಜಾತ್ರೋತ್ಸವವು ನ.27ರಿಂದ ಡಿ.12ರ ತನಕ ನೆರವೇರಲಿದ್ದು ಜಾತ್ರೋತ್ಸವದ ಪ್ರಧಾನ ದಿನಗಳಾದ ಲಕ್ಷದೀಪ, ಚೌತಿ,ಪಂಚಮಿ ಮತ್ತು ಷಷ್ಠಿಯಂದು ಮಾತ್ರ ಕೆಲವೊಂದು ಸೇವೆಗಳನ್ನು ನೆರವೇರಿಸಲು ಅವಕಾಶಗಳು ಇರುವುದಿಲ್ಲ.ಆದರೆ ಇತರ ದಿನಗಳಲ್ಲಿ ಆಶ್ಲೇಷಬಲಿ, ಪಂಚಾಮೃತ ಮಹಾಭಿಷೇಕ, ಶೇಷಸೇವೆ, ಕಾರ್ತಿಕಪೂಜೆ, ಮಹಾಪೂಜೆ, ತುಲಾಭಾರ, ನಾಗಪ್ರತಿಷ್ಠೆ ಮೊದಲಾದುವುಗಳು ಎಂದಿನಂತೆ ನೆರವೇರಲಿದೆ.ಸರ್ಪಸಂಸ್ಕಾರ ಮತ್ತು ಸಂಜೆಯ ಆಶ್ಲೇಷ ಬಲಿ ಸೇವೆಗಳು ಮಾತ್ರ ಡಿ.12ರ ತನಕ ನೆರವೇರುವುದಿಲ್ಲ.


ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ನ.26 ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಪವಿತ್ರ ಕಾರ್ಯದ ಕಾರಣ ಭಕ್ತಾಧಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯ ತನಕ ಶ್ರೀ ದೇವರ ದರುಶನ ಹಾಗೂ ಸೇವಾಧಿಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ.2 ಗಂಟೆಯ ನಂತರ ಶ್ರೀ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು ಅವಕಾಶವಿದೆ ಪ್ರಕಟಣೆಯಲ್ಲಿ ತಿಳಿಸಿದೆ.