ಪರಸ್ಪರ ಸಹೋದರತೆ ಯಿಂದ ಜನ ಮನವನ್ನು ಗೆಲ್ಲಬೇಕಾಗಿದೆ : ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್
ಹುಟ್ಟಿದ ಮಣ್ಣನ್ನು ಮೊದಲು ಪ್ರೀತಿಸು ಎಂಬ ಸತ್ಯ ವಾಖ್ಯವನ್ನು ನೀಡಿದ ಮಹಮ್ಮದ್ ಪೈಗಂಬರ್ ರವರ ಅನುಯಾಯಿಗಳು ನಾವು:ಎಂ ಎಸ್ ಮಹಮ್ಮದ್
ಮಾನವೀಯ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕ್ಕೊಂಡು ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಸಹೋದರತೆಯಿಂದ ಈ ಸಮಾಜದಲ್ಲಿ ನಾವು ಬದುಕ ಬೇಕಾಗಿದೆ.ಆ ಮೂಲಕ ಜನ ಮನವನ್ನು ಗೆಲ್ಲಬೇಕಾಗಿದೆ ಎಂದು ಕೇರಳ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಹೇಳಿದ್ದಾರೆ.
ಸುಳ್ಯ ಪೈಚಾರ್‌ನ ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ ಪೈಚಾರ್ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಸಂಘಟಿಸಲಾದ ರಾಜ್ಯ ಮಟ್ಟದ ದಫ್ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ದೇಶದ ಪ್ರಜಾಪ್ರಭುತ್ವ, ಮತ್ತು ಜಾತ್ಯಾತೀತ ತತ್ವದಿಂದ ವಿಶ್ವದಲ್ಲಿ ತಲೆ ಎತ್ತಿ ನಿಂತಿದೆ. ಮಾನವೀಯತೆ, ಪ್ರೀತಿ, ವಿಶ್ವಾಸ,ಸಮಾನತೆ, ಶಾಂತಿ ಎಲ್ಲರ ಹೃದಯದಲ್ಲಿ ಅರಳಬೇಕು ಎಂದು ಅವರು ಕರೆ ನೀಡಿದರು. ಆ ಒಂದು ಮಾನವೀಯ ಕೆಲಸ ಕಾರ್ಯವನ್ನು ಕೇರಳ ಮತ್ತು ಕರ್ನಾಟಕ ರಾಜ್ಯ ಇತ್ತೀಚಿಗೆ ಸಂಭವಿಸಿದ್ದ ಶಿರೂರು ಗುಡ್ಡ ಕುಸಿತ ಸಂಧರ್ಭದಲ್ಲಿ ಮಾಡಿದೆ.
ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಲ್ಲಿ ಅರ್ಜುನ್ ಎಂಬ ಸಹೋದರ ಕಣ್ಮರೆಯಾದಾಗ ಕೇರಳ, ಕರ್ನಾಟಕ ವೆನ್ನದೇ ಇಡೀ ನಾಡಿಗೆ ನಾಡೇ ಒಂದಾಗಿ ಪ್ರಾರ್ಥಿಸಿದ್ದು,
ಅದೇ ರೀತಿ ಮತ್ತೊಂದು ಘಟನೆಯಲ್ಲಿ ಅಪಘಾತ ಸಂಬಂಧ ಸೌಧಿ ಜೈಲಿನಲ್ಲಿದ್ದ ವ್ಯಕ್ತಿಯನ್ನು ಬಿಡಿಸಲು ಮಿಡಿದ ನಾಡಿನ ಜನತೆಯ ಮನಸ್ಸು ಕೆಲವೇ ದಿನದಲ್ಲಿ 30 ಕೋಟಿ ಹಣ ಸಂಗ್ರಹಿಸಲು ಕಾರಣವಾದದ್ದು ಅದಕ್ಕೆ ಉದಾಹರಣೆ ಎಂದು ನಾಡಿನ ಜನರ ಸೇವೆಯನ್ನು ಶ್ಲಾಘನೆ ಮಾಡಿದರು.
ಸುಳ್ಯ ತಾಲೂಕು ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಕುಂಞಿಕೋಯ ಸಅದಿ ತಂಙಳ್ ನಾವೂರು ರವರು ದುಃವಾ ನೆರವೇರಿಸಿ ಪ್ರಾಸ್ತವಿಕ ಮಾತನಾಡಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ ಎಸ್ ಮಹಮ್ಮದ್ ‘ಅಲ್ ಅಮೀನ್ ಸಂಘಟನೆ ಪೈಗಂಬರ್ ಮಹಮ್ಮದ್ ರವರ ಕಾಲದಿಂದಲೇ ಬಂದಿದೆ. ಇದೇ ಹೆಸರಿನಲ್ಲಿ ಪೈಚಾರ್ ನ ಅಲ್ ಅಮೀನ್ ಯೂತ್ ಸೆಂಟರ್ ನ ಯುವಕರು ಸಂಘಟನೆ ಮೂಲಕ ನೂರಾರು ಬಡ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಕಾರ್ಯ ಮಾಡುತ್ತಿದ್ದು ಇದು ಶ್ಲಾಘನೀಯ ಎಂದು ಹೇಳಿದರು.ಹುಟ್ಟಿದ ಮಣ್ಣನ್ನು ನಾವು ಮೊದಲು ಪ್ರೀತಿಸಬೇಕು ಈ ಸತ್ಯ ವಾಕ್ಯವನ್ನು ಕಲಿಸಿದ ಮಹಮ್ಮದ್ ಪೈಗಂಬರ್ ರವರ ಅನುಯಾಯಿಗಳಾಗಿದ್ದೇವೆ ನಾವು ಎಂದು ಹೇಳಿದರು.
ನೂರುಲ್ ಹುದಾ ಮಾಡನ್ನೂರ್ ಪ್ರಾಂಶುಪಾಲರಾದ ಅಡ್ವಕೇಟ್ ಹನೀಫ್ ಹುದವಿ
ಮುಖ್ಯ ಭಾಷಣ ಮಾಡಿದರು.
ಪೈಚಾರ್ ಅಲ್-ಅಮೀನ್ ಯೂತ್ ಸೆಂಟರ್‌ನ ಅಧ್ಯಕ್ಷ ಅಬ್ದುಲ್ ಸತ್ತಾರ್ ಪಿ.ಎ. ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್,ಬೆಂಗಳೂರು ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ಪೈಚಾರ್ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಶಮೀರ್ ಅಹಮ್ಮದ್ ನಈಮಿ, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಪಿ, ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ, ಮೀಫ್ ಉಪಾಧ್ಯಕ್ಷ ಕೆ.ಎಂ.ಮುಸ್ತಫ, ಎಪಿಎಂಸಿ ಮಾಜಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್‌ನ ಅಧ್ಯಕ್ಷ ಮಜೀದ್ ಜನತಾ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ನಗರ ಪಂಚಾಯತ್ ಸದಸ್ಯರಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ಜಾಲ್ಸೂರು ಗ್ರಾ.ಪಂ.ಸದಸ್ಯ ಮುಜೀಬ್ ಪೈಚಾರ್, ಸೆಂಟ್ರಲ್ ಮುಸ್ಲೀಂ ಕಮಿಟಿ ದ.ಕ, ಉಡುಪಿಯ ಕಾನೂನು ಸಲಹೆಗಾರರಾದ ಮೂಸ ಕುಂಞಿ ಪೈಂಬೆಚ್ಚಾಲ್, ಪ್ರಮುಖರಾದ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಅಬೂಬಕ್ಕರ್ ಹಾಜಿ ಮಂಗಳ, ಹಾಜಿ ಕತ್ತರ್ ಯೂಸೂಫ್ ಹಾಜಿ ಗೌಸಿಯಾ, ನಝೀರ್ ಶಾಂತಿನಗರ, ಡಾ.ಬಶೀರ್ ಆರ್.ಬಿ., ಅಶ್ರಫ್ ಟರ್ಲಿ, ಉನೈಸ್ ಪೆರಾಜೆ, ಲತೀಫ್ ಅಡ್ಕಾರ್, ಇಬ್ರಾಹಿಂ ಕರೀಂ ಕದ್ಕಾರ್, ಮಹಮ್ಮದ್ ಇಕ್ಬಾಲ್ ಎಲಿಮಲೆ, ಹನೀಫ್ ಹಾಜಿ, ಇಕ್ಬಾಲ್ ಟಿ.ಎಂ.ಕನಕಮಜಲು, ಫೈಝಲ್ ಕಟ್ಟೆಕ್ಕಾರ್, ಶಾಫಿ ಪ್ರಗತಿ, ಬದ್ರುದ್ದೀನ್ ಪೈಚಾರ್, ಅನ್ವರ್ ಪಂಜಿಕಲ್ಲು, ನಾಸಿರ್ ಪೆರಾಜೆ, ಸಾಜಿದ್.ಐ.ಜಿ, ರಿಫಾಯಿ.ಎಸ್.ಎ, ಇಕ್ಬಾಲ್ ಸುಣ್ಣಮೂಲೆ, ಅಬ್ದುಲ್ ಕುಂಞಿ ಮತ್ತಿತರರು ಉಪಸ್ಥಿತರಿದ್ದರು.ಅಲ್ ಅಮೀನ್ ಯೂತ್ ಸೆಂಟರ್‌ನ ಉಪಾಧ್ಯಕ್ಷ ಹನೀಫ್ ಆಲ್ಫಾ, ಪ್ರಧಾನ ಕಾರ್ಯದರ್ಶಿ ಅಬೂಸಾಲಿ, ಸದಸ್ಯರಾದ ಮುಜೀಬ್ ರಹಿಮಾನ್, ಕರೀಂ ಕೆ.ಎಂ. ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಸಹ ಪ್ರಾಧ್ಯಾಪಕರಾದ ಡಾ.ಸಲೀಂ ಮಲಿಕ್ ಅವರ ಸಾಧನೆಯನ್ನು ಗುರುತಿಸಿ ಅಲ್ ಅಮೀನ್ ವತಿಯಿಂದ ಸನ್ಮಾನಿಸಲಾಯಿತು.
ಸ್ಥಳೀಯ ಪೈಚಾರ್‌ನ ಮುಳುಗು ತಜ್ಞ ತಂಡದ ಸದಸ್ಯರ ಸೇವಾ ಕಾರ್ಯವನ್ನು ಗೌರವಿಸಿ ವೇದಿಕೆಯ ಮುಖಂಡರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಪೈಚಾರು ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ! ಆರ್ ಬಿ ಬಶೀರ್ ಸ್ವಾಗತಿಸಿ ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್ ವಂದಿಸಿದರು.