ಸೋಲು ಗೆಲುವು ಸಾಮಾನ್ಯ ಭಾಗವಹಿಸುವಿಕೆ ಅಗತ್ಯ :ಡಾ. ಉಜ್ವಲ್ ಯು.ಜೆ
ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ದೊರಕುವುದು ಅತ್ಯವಶ್ಯಕ : ಅರುಣ್ ಕುಮಾರ್
ಬ್ರಹ್ಮಗಿರಿ ಸಹೋದಯ ಕ್ಲಸ್ಟರ್ ಮಟ್ಟದ ಅಂತರ್ ಶಾಲಾ ಗಾಯನ ಸ್ಪರ್ಧೆಯು ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಅಡಿಟೋರಿಯಂನಲ್ಲಿ ನ. 23ರಂದು ನಡೆಯಿತು. ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಉಜ್ವಲ್ ಯು.ಜೆ ತೀರ್ಪುಗಾರರು ಮತ್ತು ಮಕ್ಕಳ ಜೊತೆ ಸೇರಿ ದೀಪ ಪ್ರಜ್ವಲಿಸಿ ‘ ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯ. ಭಾಗವಹಿಸುವಿಕೆ ಅತಿ ಅಗತ್ಯ’ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಬಳಿಕ ಮಾತನಾಡಿದ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ‘ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ಸೂಕ್ತ ವೇದಿಕೆ ದೊರಕುವುದು ಅತಿ ಅವಶ್ಯಕ. ಅಂತಹ ವೇದಿಕೆ ನಿಮಗೆ ದೊರಕಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ’ ಎಂದು ಶುಭ ಹಾರೈಸಿದರು.
ಹಿರಿಯ ಪ್ರಾಥಮಿಕ ವಿಭಾಗ ಮತ್ತು ಪ್ರೌಢಶಾಲಾ ವಿಭಾಗದ ಸ್ಪರ್ಧೆಯಲ್ಲಿ ಅಂಕುರ್ ಪಬ್ಲಿಕ್ ಸ್ಕೂಲ್ ನಾಪೋಕ್ಲು, ಕೊಡಗು ವಿದ್ಯಾಲಯ ಮಡಿಕೇರಿ, ಸೈನಿಕ ಸ್ಕೂಲ್ ಕುಶಾಲನಗರ, ಎಸ್.ಎಮ್.ಎಸ್ ಅಕಾಡೆಮಿ ಆಫ್ ಸೆಂಟ್ರಲ್ ಸ್ಕೂಲ್ ವಿರಾಜಪೇಟೆ, ಎ.ಎಲ್.ಜಿ ಕ್ರೆಸೆಂಟ್ ಸ್ಕೂಲ್ ಮಡಿಕೇರಿ ಮತ್ತು ಸುಳ್ಯದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ ಭಾಗವಹಿಸಿತ್ತು.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ 5ನೇ ತರಗತಿಯ ಚಾರ್ವಿ ಪಿ ಎಮ್, ಮನಸ್ವಿ ಡಿ, 6ನೇ ತರಗತಿಯ ದಿಶಾ ಎಮ್, ಕೆ ಎಮ್ ಸಮೃದ್ಧಿ ಶರ್ಮಾ, ಮಾನ್ವಿ, 7ನೇ ತರಗತಿಯ ಸಾನಿಧ್ಯ ಕೆ, ಅವನಿ ಕೆ, ಮೈಥಿಲಿ ಎ.ಎಮ್, ಈಶಾನ್ಯ ಬೆಳವಾಡಿ ಮತ್ತು ಅನುಜ್ಞ ಭಟ್ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಕೊಡಗು ವಿದ್ಯಾಲಯ ಮಡಿಕೇರಿ ದ್ವಿತೀಯ ಸ್ಥಾನವನ್ನು, ಎಸ್ ಎಮ್ ಎಸ್ ಅಕಾಡೆಮಿ ಆಫ್ ಸೆಂಟ್ರಲ್ ಸ್ಕೂಲ್ ವಿರಾಜಪೇಟೆ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಪ್ರೌಢಶಾಲಾ ವಿಭಾಗದ ಸ್ಪರ್ಧೆಯಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ 9ನೇ ತರಗತಿಯ ಅಲಿಸ್ಬ ಸಾರ, ಸ್ಕಂದ ದಿಯಾ ಪಿ ಕಲ್ಲಾಜೆ, ಸ್ಪಂದನ, ಶಮ್ಯ ಎಸ್ ಎಂ, ವಿಜ್ಞಾ ಎ ಎಸ್ , ತೃಪ್ತಿ, ಹತ್ತನೇ ತರಗತಿಯ ಸಾನ್ವಿ. ಎಸ್, ಶಿಬಾನಿ ಎಂ.ಜೆ, ರಿಮ ಫಾತಿಮಾ ಮತ್ತು ಶ್ರೀಯ ಡಿ.ಬಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡರೆ, ಕೊಡಗು ವಿದ್ಯಾಲಯ ಮಡಿಕೇರಿ ಪ್ರಥಮ ಸ್ಥಾನವನ್ನು, ಎಸ್ಎಂಎಸ್ ಅಕಾಡೆಮಿ ಆಫ್ ಸೆಂಟ್ರಲ್ ಸ್ಕೂಲ್ ವಿರಾಜಪೇಟೆ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ನಾರಾಯಣ ಕೆಳತ್ತಾಯ, ಶ್ರೀಮತಿ ಶ್ಯಾಮಲಾ ಕೇಶವ್ ಸುಳ್ಯ ಶ್ರೀಮತಿ ಸವಿತಾ ಸಂದೇಶ್ ಸುಂತೋಡು ಸಹಕರಿಸಿದರು. ಶಾಲಾ ವಿದ್ಯಾರ್ಥಿಗಳ ಪ್ರಾರ್ಥಿಸಿದರು. 9ನೇ ತರಗತಿಯ ಶ್ರದ್ಧಾ ಪೈ ಮತ್ತು ಮನನ್ ಕಾರ್ಯಕ್ರಮವನ್ನು ನಿರೂಪಿಸಿದರೆ ಆರ್ವಿ ಅಶ್ವಿನ್ ವಂದಿಸಿದನು. ಈ ಕಾರ್ಯಕ್ರಮದ ಮುಂದಾಳತ್ವವನ್ನು ಶಾಲಾ ಸಾಂಸ್ಕೃತಿಕ ಸಂಯೋಜನಾಧಿಕಾರಿ ಪ್ರಜ್ಞಾ ಡಿ ಆರ್ ವಹಿಸಿಕೊಂಡರೆ ಶಿಕ್ಷಕಿ ಶ್ರೀಮತಿ ಲಕ್ಷ್ಮಿ ಲಾವಣ್ಯ ಮತ್ತು ಶ್ರೀಮತಿ ಬಬಿತ ಸಹಕರಿಸಿದರು.
ವಿಜೇತರನ್ನು ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಜೆ, ಪ್ರಾಂಶುಪಾಲ ಅರುಣ್ ಕುಮಾರ್ ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ, ಶಿಕ್ಷಕ ಮತ್ತು ಶಿಕ್ಷಕೇತರವೃಂದದವರು ಅಭಿನಂದಿಸಿದರು.