ಮನೆ ಹಸ್ತಾಂತರ ಕಾರ್ಯಕ್ರಮ
ಪಂಬೆತ್ತಾಡಿ ಚಿಗುರು ಗೆಳೆಯರ ಬಳಗದ ಪದಗ್ರಹಣ ಸಮಾರಂಭ ಮತ್ತು ದಾನಿಗಳ ನೆರವಿನಿಂದ ನಿರ್ಮಾಣ ಗೊಂಡ ಮನೆ ಹಸ್ತಾಂತರ ಕಾರ್ಯಕ್ರಮ ನ.24 ರಂದು ಪಂಬೆತ್ತಾಡಿ ಸಭಾಭವನದಲ್ಲಿ ನಡೆಯಿತು.
ಚಿಗರು ಗೆಳೆಯರ ಬಳಗದ ಅಧ್ಯಕ್ಷ ಶ್ರೀನಿವಾಸ ಬಿ ಸಭಾಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಜೇಸಿಐ ವಲಯ ತರಬೇತುದಾರ ಸೋಮಶೇಖರ ನೇರಳ ಪಾಲ್ಗೊಂಡಿದ್ದರು. ನೂತನ ಪದಾಧಿಕಾರಿಗಳಿಗೆ
ಪ್ರಮಾಣ ವಚನ ಬೋಧನೆಯನ್ನು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ವಿಜಯ ಕುಮಾರ್ ಉಬರಡ್ಕ ಮಾಡಿದರು.
ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ,ಯುವಜನ ಸಂಯುಕ್ತ ಮಂಡಳಿ ಕಾರ್ಯದರ್ಶಿ ನಮಿತಾ, ನಿರ್ದೇಶಕ ಜನಾರ್ಧನ ನಾಗತೀರ್ಥ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಬಾಲಕೃಷ್ಣ ಕೋಟೆಗುಡ್ಡೆ ಪ್ರಾರ್ಥಿಸಿದರು.
ಅಶ್ವತ್ ಬಾಬ್ಲುಬೆಟ್ಟು ಸ್ವಾಗತಿಸಿದರು.ಶರಣ್ಯ ಕುಮಾರ್ ಮಡಪ್ಪಾಡಿ ವಾರ್ಷಿಕ ವರದಿ ವಾಚಿಸಿದರು .ಶರತ್ ಕುಮಾರ್ ಮಡಪ್ಪಾಡಿ ನಿರೂಪಿಸಿದರು.ರಮೇಶ್ ಮಡಿವಾಳಮಜಲು ವಂದಿಸಿದರು.
ಮನೆ ಹಸ್ತಾಂತರ ಕಾರ್ಯಕ್ರಮ:
ಪದಗ್ರಹಣ ಸಮಾರಂಭಕ್ಕೆ ಮೊದಲು ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಚಿಗುರು ಗೆಳೆಯರ ಬಳಗ ಮತ್ತು ದಾನಿಗಳಿಂದ ನಿರ್ಮಾಣ ಗೊಂಡ ಮನೆಯನ್ನು ಪುಷ್ಪಾವತಿ ಕೋಟಿಗುಡ್ಡೆಯವರಿಗೆ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ವಿಜಯ ಕುಮಾರ್ ಉಬರಡ್ಕ
ಹಸ್ತಾಂತರಿಸಿದರು. ಚಿಗರು ಗೆಳೆಯರ ಬಳಗದ ಅಧ್ಯಕ್ಷ ಶ್ರೀನಿವಾಸ ಬಿ,
ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕಳ, ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಾಧವ ಗೌಡ ಜಾಕೆ , ಸಂತೋಷ್ ಜಾಕೆ ಮೊದಲಾದವರು ಉಪಸ್ಥಿತರಿದ್ದರು