ನಲಿಕೆ ಫ್ರೆಂಡ್ಸ್ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ, ಸನ್ಮಾನ ಹಾಗೂ ಯಕ್ಷಗಾನ ಬಯಲಾಟವು ಕನಕಮಜಲು ಶ್ರೀ ಆತ್ಮರಾಮ ಭಜನಾ ಮಂದಿರದಲ್ಲಿ ನ.18 ರಂದು ನಡೆಯಿತು.
ಸಂಜೆ ಬಾಬು ಅಜಿಲ ಬಾಳಿಲ ತಂಡದವರಿಂದ ರಸರಾಗ ಸಂಭ್ರಮ ಕಾರ್ಯಕ್ರಮ ನಂತರ ಸಭಾ ಕಾರ್ಯಕ್ರಮ ನಡೆಯಿತು. ಶಶಾಂಕ್ ನೆಲ್ಲಿತಾಯ ಪುತ್ತೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ನಲಿಕೆ ಫ್ರೆಂಡ್ಸ್ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಬಾಬು ಅಜಿಲ ಅರಂಬೂರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ರಮನಾಥ ರೈ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ನ್ಯಾಯವಾದಿ ವೆಂಕಪ್ಪ ಗೌಡ, ನ.ಪಂ. ಮಾಜಿ ಸದಸ್ಯ ಗೋಕುಲ್‌ದಾಸ್, ಕನಕಮಜಲು ಆತ್ಮರಾಮ ಭಜನಾ ಮಂದಿರದ ಅಧ್ಯಕ್ಷ ವಸಂತ ಮಳಿ, ಕನಕಮಜಲು ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ, ಕನಕಮಜಲು ಯುವಕ ಮಂಡಲದ ಅಧ್ಯಕ್ಷ ಹರ್ಷಿತ್ ಉಗ್ಗಮೂಲೆ, ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಯರಾಮ ಅಜಿಲ ಬೊಳಿಯಮಜಲು, ನಲಿಕೆ ಫ್ರೆಂಡ್ಸ್ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವರಾಮ ಎ. ಪ್ರಗತಿಪರ ಕೃಷಿಕ ವಿಜಯ ನರಿಯೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಕೊಡ್ಲ ಗಣಪತಿ ಭಟ್, ಹಿರಿಯ ವಾಲಿಬಾಲ್ ಆಟಗಾರ ರವಿಚಂದ್ರ ಕಾಪಿಲ, ನಿವೃತ್ತ ಶಿಕ್ಷಕ ಭಾಸ್ಕರ ಮಾಸ್ಟರ್ ನರಿಯೂರು, ದೈವನರ್ತಕ ಜಯರಾಮ ಬೊಳಿಯಮಜಲು, ಭಜಕ ಶ್ರೀಧರ ನರಿಯೂರು, ಲೈನ್‌ಮ್ಯಾನ್ ಸಚಿನ್ ಕೆ.ಬಿ., ಸಾಧಕಿ ಅನುಜ್ಞಾ ಪಿ.ವಿ. ಪರವಾಗಿ ತಾಯಿ ನಳಿನಾಕ್ಷಿ ಪಲ್ಲತ್ತಡ್ಕ, ಭರತನಾಟ್ಯ ಕಲಾವಿದೆ ಆಕಾಂಕ್ಷ ಕೆ. ಜಿ., ಕಲಾಕ್ಷೇತ್ರದ ಸಾಧನೆಗಾಗಿ ಮೋಕ್ಷಿತ್ ಸಬ್ಬೇಜಿಯವರನ್ನು ಸನ್ಮಾನಿಸಲಾಯಿತು. ವಿಜಿತ್ ಮಂಡೆಕೋಲು ಸ್ವಾಗತಿಸಿ, ಮನೋಹರ ಪಂಜಿಗಾರು ವಂದಿಸಿದರು.
ನಂತರ ರಾತ್ರಿ ಯಕ್ಷಗಾನ ಬಯಲಾಟ ನಡೆಯಿತು.