ಭಾರತದ ಸಂವಿಧಾನವನ್ನು ಅಂಗೀಕರಿಸಿದ 75ನೇ ವಷ೯ ವನ್ನು ಅಥ೯ಪೂಣ೯ವಾಗಿ ಸಂಭ್ರಮಿಸಲು ಗ್ರಾಮ ಪಂಚಾಯತ್ ಅರಿವು ಕೇಂದ್ರಗಳಲ್ಲಿ ನ.26 ರಿಂದ ನ.28ರವರೆಗಿನ ಸಂವಿಧಾನ ಸಂಭ್ರಮ ಕಾಯ೯ ಕ್ರಮದ ಉದ್ಘಾಟನೆ ಯು ದೀಪ ಬೆಳಗಿಸುವುದರ ಮೂಲಕ ಮಕ೯ಂಜ ಗ್ರಾಮಪಂಚಾಯತ್ ಅರಿವು ಕೇಂದ್ರದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಹೊಸೋಳಿಕೆ ನೆರವೇರಿಸಿದರು. ಡಾ| ಬಿ.ಆರ್. ಅಂಬೇಡ್ಕರ್ ಮತ್ತು ಗ್ರಂಥಾಲಯ ವಿಜ್ಞಾನಿ ಎಸ್ ಆರ್ ರಂಗನಾಥನ್ ರವರ ಭಾವ ಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಸಂವಿಧಾನದ ಪೀಠಿಕೆ ಪ್ರತಿಜ್ಞೆ ಯನ್ನು ಪಂಚಾಯತ್ ಕಾಯ೯ ದಶಿ೯ ಪದ್ಮಾವತಿಯವರು ನೆರವೇಸಿದರು. ಶಾಲಾ ಮಕ್ಕಳಿಗೆ ಸಂವಿಧಾನದ ಪೀಠಿಕೆ ಗಟ್ಟಿಯಾಗಿ ಓದುವುದು, ದೇಶಭಕ್ತಿ ಗೀತೆ ಮತ್ತು ಪ್ರಬಂಧ ಸ್ಪರ್ಧೆ ಯನ್ನು ಏಪ೯ಡಿಸಲಾಯಿತು.
ಈ ಕಾಯ೯ ಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಸಂಧ್ಯಾ ಸೇವಾಜೆ ಮತ್ತು ಸದಸ್ಯರು ಯಶವಂತ ಸೂಟೆಗದ್ದೆ, ಪಂಚಾಯತ್ ಸಿಬ್ಬಂದಿ ವಗ೯ದವರು, ಮುಡ್ನೂರು ಮಕ೯ಂಜ, ಮಿತ್ತಡ್ಕ ಮಕ೯ಂಜ ಮತ್ತು ದಾಸರಬೈಲು ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಗ್ರಂಥಾಲಯದ ಮೇಲ್ವಿಚಾರಕ ರಾದ ತೇಜಾವತಿ ಪಿಯವರು ಕಾಯ೯ ಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾಥ೯ಸಿದರು. ಗ್ರಂಥಾಲಯದ ಮೇಲ್ವಿಚಾರಕಿ ಸ್ವಾಗತಿಸಿ, ವಂದಿಸಿದರು.