ಕೆವಿಜಿ ಕಾನೂನು ಮಹಾವಿದ್ಯಾಲಯ ಸುಳ್ಯ ಹಾಗೂ ಅಧಿವಕ್ತ ಪರಿಷತ್ ದ.ಕ ಜಿಲ್ಲೆ ಸುಳ್ಯ ಘಟಕ ಇದರ ಸಹಯೋಗದೊಂದಿಗೆ ನ. 26 ಕೆವಿಜಿ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಶುಪಾಲ ಡಾ. ಉದಯಕೃಷ್ಣ ಬಿ ವಹಿಸಿದ್ದರು. ಕೆವಿಜಿ ಕಾನೂನು ಕಾಲೇಜಿನ ಸಲಹೆಗಾರ ಕೆ.ವಿ. ಹೇಮನಾಥ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೆಳ್ತಂಗಡಿಯ ಹಿರಿಯ ವಕೀಲರಾದ ಸುಬ್ರಹ್ಮಣ್ಯ ಅಘರ್ಥ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ನಡುವಿನ ಗಮನಾರ್ಹ ಸಮತೋಲನ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಕೆವಿ ದಾಮೋದರ ಗೌಡ, ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ ಕೊಡ್ತುಗುಳಿ, ದ.ಕ ಜಿಲ್ಲಾ ಅಧಿವಕ್ತ ಪರಿಷತ್ ಉಪಾಧ್ಯಕ್ಷ ಜಗದೀಶ್ ಡಿಪಿ, ಸುಳ್ಯ ಘಟಕದ ಅಧ್ಯಕ್ಷ ದಿಲೀಪ್ ಬಾಬ್ಲಬೆಟ್ಟು, ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಟೀನಾ ಹಚ್.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಿಗೆ ಸಂವಿಧಾನದ ವಿಧಿಗಳ ಚಿತ್ರ ಪ್ರದರ್ಶಿಸುವ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ನ್ಯಾಯವಾದಿ ಸುಮಾ ಕೆ.ಎಸ್ ಪ್ರಾರ್ಥಿಸಿದರು. ದಿಲೀಪ್ ಬಾಬ್ಲಬೆಟ್ಟು ಸ್ವಾಗತಿಸಿ, ಶ್ರೀಮತಿ ಟೀನಾ ಹೆಚ್.ಎಸ್ ವಂದಿಸಿದರು. ಉಪನ್ಯಾಸಕಿ ನಯನ ಪಿ.ಯು ಕಾರ್ಯಕ್ರಮ ನಿರೂಪಿಸಿದರು.