ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಡಿ. 23ರಿಂದ 27ರ ತನಕ ಜರಗಲಿದ್ದು, ಆಮಂತ್ರಣ ಪತ್ರ ಅಭಿಯಾನ ಡಿ. 8ರಂದು ನಡೆಯಲಿದೆ.
ಅಭಿಯಾನವನ್ನು ಶ್ರೀಮತಿ ಕಮಲ ಬೈಲಾಡಿ ಪಾನ ಉದ್ಘಾಟಿಸಲಿದ್ದಾರೆ. ವಿವಿಧ ಬೈಲುವಾರು ಸಮಿತಿಗಳ ಮೂಲಕ ಕಡಬ, ಸುಳ್ಯ ಮತ್ತು ಪುತ್ತೂರು ತಾಲೂಕಿನ ವಿವಿಧ ಭಾಗಗಳಲ್ಲಿ ಆಮಂತ್ರಣ ಪತ್ರ ಹಂಚುವ ಕಾರ್ಯ ಅಭಿಯಾನದಲ್ಲಿ ನಡೆಯಲಿದೆ.