ವಿಶೇಷ ಚೇತನ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವೃಷಾಂಕ್ ಎನ್.ಎ. ರಾಜ್ಯ ಮಟ್ಟಕ್ಕೆ ಆಯ್ಕೆ

0

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದ ವಿಶೇಷ ಚೇತನ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪೆರಾಜೆ ಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿ ವೃಷಾಂಕ್ ಎನ್ ಎ ರವರು ಭಾಗವಹಿಸಿ ೩ ಸ್ಪರ್ಧೆಯಲ್ಲಿ ಉತ್ತಮ ಪ್ರಧರ್ಶನ ನೀಡಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


೧೦೦ ಮೀಟರ್ ಓಟ, ಗುಂಡು ಎಸೆತ, ಉದ್ದ ಜಿಗಿತ ಈ ೩ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ.
ಇವರು ಜ್ಯೋತಿ ಪ್ರೌಢ ಶಾಲೆಯ ೧೦ ನೇ ತರಗತಿ ವಿದ್ಯಾರ್ಥಿ. ನಿಡ್ಯಮಲೆ ನಿವಾಸಿ ಅಚ್ಚುತ ಹಾಗೂ ಜಯಶ್ರೀ ದಂಪತಿಯ ಪುತ್ರ. ದೈಹಿಕ ಶಿಕ್ಷಣ ನಿರ್ದೇಶಕ ನಿತಿನ್ ಮಜಿಕೋಡಿ ತರಬೇತಿ ನೀಡಿದ್ದಾರೆ.