ಗುತ್ತಿಗಾರಿನ ಸುಬ್ರಹ್ಮಣ್ಯೇಶ್ವರ ಮೋಟಾರ್ ವರ್ಕ್ಸ್ ನ ಮಾಲಕ ಕಾಂತಪ್ಪ ಪೂಜಾರಿ ನಿಧನ

0

ಗುತ್ತಿಗಾರಿನ ಸುಬ್ರಹ್ಮಣ್ಯೇಶ್ವರ ಮೋಟಾರ್ ವರ್ಕ್ಸ್ ನ ಮಾಲಕ ಗುತ್ತಿಗಾರು ನಿವಾಸಿ, ಮೂಲತಹ ಪುತ್ತೂರು ಇರ್ದೆಯವರಾದ ಕಾಂತಪ್ಪ ಪೂಜಾರಿ ಡಿ.7 ರಂದು ಹೃದಯಾಘಾತದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 50 ವರ್ಷ ವಯಸ್ಸಾಗಿತ್ತು. ಮೃತರು ಗುತ್ತಿಗಾರಿನಲ್ಲಿ ದ್ವಿತೀಯ ಪಿ.ಯು ಓದುತ್ತಿರುವ ಪ್ರಜ್ಞಾ, 9 ಏ ತರಗತಿ ಓದುತ್ತಿರುವ ನಿಶಿತ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.