ಪುತ್ತೂರಿನ ವಿವೇಕಾನಂದ ಇಂಗ್ಲೀಷ್ ಮೀಡಿಯಂ ಶಾಲೆ ಆವರಣದಲ್ಲಿ ಆಯೋಜಿಸಿದ್ದ 42ನೇ ಬಿಕೆಐ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಕುನಾಲ್ ಎನ್.ಎಲ್. ನೀರಬಿದಿರೆ ಬಹುಮಾನ ಪಡೆದಿದ್ದಾನೆ.
ಪುತ್ತೂರಿನ ಇನ್ ಸ್ಟಿಟ್ಯೂಷನ್ ಆಫ್ ಕರಾಟೆ ಅಂಡ್ ಆರ್ಟ್ಸ್ ಸಂಸ್ಥೆಯು ಡಿ.6ರಿಂದ 8ರವರೆಗೆ ಮೂರು ದಿನಗಳ ಕಾಲ ಸ್ಪರ್ಧೆ ಆಯೋಜಿಸಿತ್ತು. ಡಿ. 8ರಂದು ಬ್ರೌನ್ ಬೆಲ್ಟ್ 30 ಕೆಜಿ ಒಳಗಿನವರ ವಿಭಾಗದಲ್ಲಿ ನಡೆದ ಕುಮಿತೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾನೆ.
ಕುನಾಲ್ ಮಾರುತಿ ಪಬ್ಲಿಕ್ ಸ್ಕೂಲ್ ನಲ್ಲಿ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ಸುಳ್ಯ ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕಿ ವಾರಿಜಾ ಎ. ನೀರಬಿದಿರೆ ಹಾಗೂ ಲೋಕೇಶ್ ನೀರಬಿದಿರೆ ದಂಪತಿಯ ಪುತ್ರ. ಈತನಿಗೆ ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಅವರು ತರಬೇತಿ ನೀಡುತ್ತಿದ್ದಾರೆ.