ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಸುಣ್ಣಮೂಲೆ, ಪ್ರಧಾನ ಕಾರ್ಯದರ್ಶಿ ಎ.ಎಂ.ಫೈಝಲ್ ಝುಹ್‌ರಿ, ಕೋಶಾಧಿಕಾರಿ ಇಸ್ಮಾಯಿಲ್ ಸಅದಿ ಕುಂಬಕ್ಕೋಡು ಆಯ್ಕೆ
ಎಸ್ ಎಂ ಎ ಸುಳ್ಯ ರೀಜಿನಲ್ ಸಮಿತಿಯ ಮಹಾಸಭೆಯು ಇತ್ತೀಚೆಗೆ ಗಾಂಧಿನಗರ ಮದರಸ ಸಭಾಂಗಣ ದಲ್ಲಿ ರೀಜನಲ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಯ್ಯಿದ್ ಕುಂಞಿಕೋಯ ಸಅದಿ ತಂಙಳ್ ರವರು ಉದ್ಘಾಟನೆಯನ್ನು ನೆರವೇರಿಸಿದರು.
ಗಾಂಧಿನಗರ ಖತೀಬ್ ಅಶ್ರಫ್ ಕಾಮಿಲ್ ಸಖಾಫಿ ಯವರು ಅನುಸ್ಮರಣಾ ಭಾಷಣ ನಡೆಸಿದರು.
ರೀಜನಲ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆ ಯವರು ವರದಿ ಹಾಗೂ ಲೆಕ್ಕಪತ್ರ ವನ್ನು ಮಂಡಿಸಿದರು. ಜಿಲ್ಲಾ ನಾಯಕರಾದ ಅಬ್ಬಾಸ್ ಬಟ್ಲಡ್ಕ ರವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಸುಣ್ಣಮೂಲೆ, ಪ್ರಧಾನ ಕಾರ್ಯದರ್ಶಿ ಎ.ಎಂ.ಫೈಝಲ್ ಝುಹ್‌ರಿ ಕಲ್ಲುಗುಂಡಿ, ಕೋಶಾಧಿಕಾರಿ ಇಸ್ಮಾಯಿಲ್ ಸಅದಿ ಕುಂಬಕ್ಕೋಡು, ವಕ್ಫ್ ಅಧ್ಯಕ್ಷರಾಗಿ ಮುಹಮ್ಮದ್ ಕುಂಞಿ ಗೂನಡ್ಕ, ಸಂಘಟನಾ ಅಧ್ಯಕ್ಷರಾಗಿ ಸಿರಾಜುದ್ದೀನ್ ಸಖಾಫಿ ಗಾಂಧಿನಗರ, ಕ್ಷೇಮ ಕಾರ್ಯ ಅಧ್ಯಕ್ಷರಾಗಿ ಮುಹ್ಯದ್ದೀನ್ ಫ್ಯಾನ್ಸಿ, ಸಂಘಟನಾ ಕಾರ್ಯದರ್ಶಿ ಯಾಗಿ ಅಬ್ದುಲ್ ಲತೀಫ್ ಅಡ್ಕಾರು, ಕ್ಷೇಮ ಕಾರ್ಯ ಕಾರ್ಯದರ್ಶಿ ಯಾಗಿ ಸಿರಾಜ್ ಏಣಾವರ ಹಾಗೂ ಸಮಿತಿ ಸದಸ್ಯರಾಗಿ ಅಬ್ದುಲ್ ಹಮೀದ್ ಬೀಜಕೊಚ್ಚಿ, ನಿಝಾರ್ ಸಖಾಫಿ ಮುಡೂರು, ಅಬ್ದುಲ್ಲಾ ಹಾಜಿ ಜಯನಗರ, ಹಂಝ ಝುಹ್‌ರಿ ಪೈಚಾರು, ಜಿ.ಎಸ್ ಅಬ್ದುರಹಿಮಾನ್ ಅಡ್ಕಾರು, ಅಬ್ದುಲ್ ಮಜೀದ್ ಸುಣ್ಣಮೂಲೆ, ಇಬ್ರಾಹಿಂ ಮುಸ್ಲಿಯಾರ್ ಬದಿಯಡ್ಕ, ಇಸ್ಮಾಯಿಲ್ ಸಖಾಫಿ ಪೈಂಬಚ್ಚಾಲು, ಅಬ್ದುರಹಿಮಾನ್ ಹಾಜಿ ಕುಂಬಕ್ಕೋಡು, ಇಬ್ರಾಹಿಂ ಜಿ.ಎಂ ಎಲಿಮಲೆ, ಎಸ್.ಎಂ ಅಬ್ದುಲ್ಲಾ ಗೂನಡ್ಕ, ಅಬ್ದುಲ್ಲತೀಫ್ ಸಖಾಫಿ ಗೂನಡ್ಕ, ಅಬೂಬಕ್ಕರ್ ಪೆರಾಜೆ, ಶಾಹಿದ್ ಎಂ.ಐ, ಅಬ್ದುಲ್ಲತೀಫ್ ಹರ್ಲಡ್ಕ, ಅಬೂಬಕ್ಕರ್ ಎಸ್.ಪಿ, ಅಬೂಬಕ್ಕರ್ ಜಟ್ಟಿಪಳ್ಳ, ಶರೀಫ್ ಜಟ್ಟಿಪಳ್ಳ, ಜಿ.ಎಸ್ ಅಬ್ದುಲ್ಲಾ ಜೀರ್ಮುಖಿ ರವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಅಬ್ದುಲ್ಲತೀಫ್ ಸಖಾಫಿ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಎ.ಎಂ.ಫೈಝಲ್ ಝುಹ್‌ರಿ ವಂದಿಸಿದರು.