ವಾಹನ ಸವಾರರ ಪರದಾಟ
ಡಿ 10 ರಂದು ಸಂಜೆ ಸುರಿದ ಒಂದು ಸಣ್ಣ ಮಳೆಗೆ ಹಳೆ ಗೇಟು ರಸ್ತೆ ಹಾಗೂ ಪೈಚಾರ್ ಜಂಕ್ಸನ್ ಬಳಿ ಮಳೆ ನೀರಿನಿಂದ ತುಂಬಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಪ್ರತಿ ಬಾರಿ ಮಳೆ ಬಂದಾಗ ಈ ಭಾಗದಲ್ಲಿ ನೀರು ನಿಲ್ಲುವುದು ಸಹಜವಾಗಿ ಹೋಗಿದೆ.
ಸಂಬಂಧಪಟ್ಟವರು ಈ ಭಾಗದಲ್ಲಿ ಎಷ್ಟೇ ದುರಸ್ಥಿ ಕಾರ್ಯ ಮಾಡಿದರು ಮಳೆ ನೀರನ್ನು ರಸ್ತೆಯಲ್ಲಿ ನಿಲ್ಲದೆ ಸರಾಗವಾಗಿ ಹೋಗುವ ವ್ಯವಸ್ಥೆಯನ್ನು ಮಾಡಲು ಸಾಧ್ಯವಾಗುತ್ತಿಲ್ಲ.