ನೆಲ್ಲೂರು ಕೆಮ್ರಾಜೆ : ಹರ್ಲಡ್ಕ – ದೊಡ್ಡಡ್ಕ – ಅಡಿಕೆಹಿತ್ಲು ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿಪೂಜೆ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಹರ್ಲಡ್ಕ – ದೊಡ್ಡಡ್ಕ ಅಡಿಕೆಹಿತ್ಲು ರಸ್ತೆಯ ಕೂಟೇಲು ಎಂಬಲ್ಲಿ, ಶಾಸಕರ ಅನುದಾನದಲ್ಲಿ ನಡೆಯುವ ರಸ್ತೆ ಕಾಂಕ್ರಿಟೀಕರಣ ಮಾಡುವ ಕಾಮಗಾರಿಗೆ ಗುದ್ದಲಿಪೂಜೆಯು ಡಿ.10ರಂದು ನಡೆಯಿತು.

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಧನಂಜಯ ಕೋಟೆಮೂಲೆ ಗುದ್ದಲಿಪೂಜೆ ನೆರವೇರಿಸಿದರು. ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಯವರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.


ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಯಜ್ಞೇಶ್ವರ ನಾರ್ಣಕಜೆ, ಶಕ್ತಿಕೇಂದ್ರ ಪ್ರಮುಖ್ ವೇಣುಗೋಪಾಲ ಮಂದ್ರಪ್ಪಾಡಿ, ನಾರ್ಣಕಜೆ ಬೂತ್ ಸಮಿತಿ ಅಧ್ಯಕ್ಷ ವಿನಯಚಂದ್ರ ಸುಳ್ಳಿ, ಕಾರ್ಯದರ್ಶಿ ಗಂಗಾಧರ ಮಂದ್ರಪ್ಪಾಡಿ, ಹರಿಪ್ರಸಾದ್ ಎಲಿಮಲೆ, ಬೋಜಪ್ಪ ಹರ್ಲಡ್ಕ, ಮಾಧವ ಹರ್ಲಡ್ಕ, ಜಯಂತ ಹರ್ಲಡ್ಕ, ಕೃಷ್ಣಪ್ಪ ಹರ್ಲಡ್ಕ, ಮಾಧವ ಕೋಟೆಲು, ಸಂಜೀವ ದೊಡ್ಡಡ್ಕ, ಗಂಗಾಧರ ದೊಡ್ಕಡ್ಕ, ಶೈಲೇಶ್ ದೊಡ್ಡಡ್ಕ, ಅರುಣ ಕೂಟೇಲು, ಗುರುಪ್ರಸಾದ್ ಕೂಟೇಲು, ಮಹಾಬಲ ಕೂಟೇಲು, ಲೋಕೇಶ ಕೂಟೇಲು, ಕಾಂಟ್ರಕ್ಟರ್ ಹರಿಪ್ರಸಾದ್ ಎಲಿಮಲೆ ಮತ್ತಿತರು ಉಪಸ್ಥಿತರಿದ್ದರು.