ಹೆಚ್ಚುವರಿ ಕೆಲಸದ ಮೂಲಕ ಅಗಲಿದ ನಾಯಕನಿಗೆ ಸೊಸೈಟಿಯ ಗೌರವ
ನೆಲ್ಲೂರು ಕೆಮ್ರಾಜೆ ಸೊಸೈಟಿಯಲ್ಲಿ ಕಪ್ಪು ಪಟ್ಟಿ ಧರಿಸಿ ಶೋಕಾಚರಣೆ
ರಜೆ ನೀಡದೆ ಒಂದು ಗಂಟೆ ಹೆಚ್ಚುವರಿ ಕೆಲಸದ ನಿರ್ಧಾರ ಮಾಡಿದ ಸಹಕಾರಿ ಸಂಘ
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನರಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮೂರು ದಿನಗಳ ಶೋಕಾಚರಣೆ ಮತ್ತು ಇಂದು ಸರಕಾರಿ ರಜೆಗೆ ಸರಕಾರ ಸೂಚಿಸಿದ್ದು ಈ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಿದೆ.
ಆದರೆ ಶೋಕಾಚರಣೆಯಲ್ಲಿ ಭಾಗಿಯಾದ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಇಂದು ಒಂದು ಘಂಟೆ ಹೆಚ್ಚು ಕೆಲಸ ಮಾಡುವುದರ ಮೂಲಕ ಅಗಲಿದ ನಾಯಕನಿಗೆ ಗೌರವ ಸಲ್ಲಿಸಲು ನಿರ್ಧರಿಸಿದೆ.
ಅದರಂತೆ ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿ ಶೋಕಾಚರಣೆ ನಡೆಸಿದ್ದು ಬಳಿಕ ಕೆಲಸ ನಿರತರಾದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೊಸೈಟಿ ಅಧ್ಯಕ್ಷ ವಿಷ್ಣು ಭಟ್ ಮೂಲತೋಟರವರು “ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ನಿಧನ ಹಿನ್ನೆಲೆಯಲ್ಲಿ ಸರಕಾರ ಶೋಕಾವರಣೆಯ ಪ್ರಯುಕ್ತ ರಜೆ ಘೋಷಣೆ ಮಾಡಿದ್ದರೂ, ನಮ್ಮ ಸಹಕಾರಿ ಸಂಘ ಇಂದು ಒಂದು ಗಂಟೆ ಹೆಚ್ಚು ಕೆಲಸ ಮಾಡುವುದರ ಮೂಲಕ ಶೋಕಾಚರಣೆ ಆಚರಿಸುತ್ತಿದ್ದೇವೆ ಎಂದಿದ್ದಾರೆ.
ಸುದ್ದಿ ಬಿಡುಗಡೆಯ ಆಶಯವೂ ಕೆಲಸದ ಮೂಲಕ ಅಗಲಿದ ನಾಯಕರಿಗೆ ಗೌರವ ಸಲ್ಲಿಸುವುದೇ ಆಗಿದ್ದು, ಪತ್ರಿಕೆಯ ಗೌರವ ಸಂಪಾದಕ ಡಾ. ಯು.ಪಿ.ಶಿವಾನಂದರು ಈ ಕುರಿತು ಕೆಲವು ಬಾರಿ ಸಂಪಾದಕೀಯಗಳನ್ನೂ ಬರೆದಿದ್ದರು. ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘವೂ ಈ ಮಾದರಿಯನ್ನು ಅನುಸರಿಸಿದೆ.