ಸುಳ್ಯದಲ್ಲಿ ನಡೆದ ಘಟನೆ
ಸುಳ್ಯ ಜ್ಯೋತಿ ಸರ್ಕಲ್ ಬಳಿ ಮೇಲಿನ ಕಾನತ್ತಿಲ ಕಟ್ಟಡದಲ್ಲಿ ವೆಲ್ಡಿಂಗ್ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ.
ಜ್ಯೋತಿ ಸರ್ಕಲ್ ಬಳಿ ಮೇಲಿನ ಕಾನತ್ತಿಲದಲ್ಲಿ ಕಟ್ಟಡ ವೆಲ್ಡಿಂಗ್ ಕೆಲಸ ಮಾಡುತ್ತಿರುವಾಗ ಕುಸಿದು ಬಿದ್ದರೆನ್ನಲಾಗಿದೆ.
ಅಲ್ಲಿ ಸೇರಿದ್ದ ಸ್ಥಳೀಯರು ಕೂಡಲೇ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ತಲುಪುಷ್ಟರಲ್ಲಿ ಮೃತಪಟ್ಟಿದ್ದರು.
ಮೃತಪಟ್ಟ ವ್ಯಕ್ತಿ ಕಲ್ಲಡ್ಕ ನಿವಾಸಿ ಪ್ರಮೋದ್ ಎಂದು ತಿಳಿದುಬಂದಿದೆ.