ಪೆರಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ, ಬಿಜೆಪಿ ನಾಯಕ ಎ.ಸಿ. ಹೊನ್ನಪ್ಪ ನಿಧನ

0

ಪೆರಾಜೆ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರು, ಪೆರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ, ಬಿಜೆಪಿ ಹಿರಿಯ ಮುಖಂಡರಾಗಿದ್ದ ಅಮಚೂರು  ಎ.ಸಿ.  ಹೊನ್ನಪ್ಪ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾದರು. ಇವರಿಗೆ 72 ವರ್ಷ ವಯಸ್ಸಾಗಿತ್ತು. 

ಕೆಲ ದಿನಗಳ ಹಿಂದ ಬ್ರೈನ್ ಹ್ಯಾಮರೇಜ್ ಗೊಳಗಾಗಿದ್ದ ಇವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು, ಬಳಿಕ‌ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು‌ ಹೋಗಲಾಯಿತು. ಎರಡು ದಿನಗಳ ಹಿಂದೆ ಮತ್ತೆ ಸುಳ್ಯ ದ ಕೆ.ವಿ.ಜಿ. ಆಸ್ಪತ್ರೆಗೆ ಕರೆದುಕೊಂಡು‌ ಬರಲಾಯಿತು. ಇಂದು‌ ಮುಂಜಾನೆ ಅವರು ನಿಧನರಾದರು.

ಮೃತರು ಪತ್ನಿ ಗೀತಾ, ಪುತ್ರ ಸಂಭ್ರತ್ ರಾಜ್, ಪುತ್ರಿ ಸುಶ್ಮಿತಾ, ಸಹೋದರರಾದ ಎ.ಸಿ. ವಸಂತ,  ಭರತ್, ಓರ್ವ ಸಹೋದರಿಯನ್ನು ಅಗಲಿದ್ದಾರೆ